WFTW Body: 

ನಾವು ಬೆಳಕಿನಲ್ಲಿ ನಡೆಯುವುದಿಲ್ಲವಾದರೆ, ದೇವರೊಡನೆ ನಾವು ಅನ್ಯೋನ್ಯತೆಯಿಂದಿರಲು ಸಾಧ್ಯವಿಲ್ಲವೆಂದು ಸತ್ಯವೇದ 1 ಯೋಹಾನನು 1:7 ರಲ್ಲಿ ನಮಗೆ ಹೇಳುತ್ತದೆ. ನಾವು ಬೆಳಕಿನಲ್ಲಿ ನಡೆಯುವುದಾದರೆ, ನಿಶ್ಚಯವಾಗಿಯೂ ನಾವೇನನ್ನೂ ಅಡಗಿಸಲಾಗುವುದಿಲ್ಲ, ಏಕೆಂದರೆ, ಬೆಳಕು ಎಲ್ಲವನ್ನೂ ತೋರಿಸುತ್ತದೆ. ಕತ್ತಲಿನಲ್ಲಿ ನಡೆಯುವ ವ್ಯಕ್ತಿಯಲ್ಲಿಯೇ ತನ್ನ ಜೀವನದಲ್ಲಿ ಏನಾದರೂ ಅಡಗಿಸಲು ಇರುವುದು.

ನಾವು ಬೆಳಕಿನಲ್ಲಿ ನಡೆದರೆ, ನಮ್ಮ ಜೀವನವೊಂದು ತೆರೆದ ಪುಸ್ತಕ. ಆಗ ನಮ್ಮ ಖಾಸಗಿ ಜೀವನವನ್ನು, ನಮ್ಮ ಲೆಕ್ಕದ ಪುಸ್ತಕಗಳನ್ನು ಮತ್ತು ಎಲ್ಲವನ್ನೂ ಪರೀಕ್ಷಿಸಲು ನಾವು ಜನರನ್ನು ಆಮಂತ್ರಿಸಬಹುದು. ನಾವೇನನ್ನೂ ಅಡಗಿಸಬಯಸುವುದಿಲ್ಲ. ನಾವು ಪರಿಪೂರ್ಣರೆಂದು ಅದರರ್ಥವಲ್ಲ. ನಾವು ಪ್ರಾಮಾಣಿಕರೆಂದು ಮಾತ್ರ ಅದರರ್ಥ.

ನಮ್ಮೆಲ್ಲರಿಂದ ಪ್ರಥಮವಾಗಿ ದೇವರು ಅಪೇಕ್ಷಿಸುವುದೇನೆಂದರೆ, ಪ್ರಾಮಾಣಿಕತೆ - ಸಂಪೂರ್ಣ ಪ್ರಾಮಾಣಿಕತೆ. ನಾವು ಮೊದಲು ಪ್ರಾಮಾಣಿಕರಾಗಲು ಮನಸ್ಸುಳ್ಳವರಾಗಿದ್ದರೆ, ನಮ್ಮ ಬಹುತೇಕ ಸಮಸ್ಯೆಗಳು ಬೇಗನೇ ಪರಿಹರಿಸಲ್ಪಡುವುವು/ಬಗೆಹರಿಯಲ್ಪಡುವುವು. ದೇವರ ಮತ್ತು ಮನುಷ್ಯರ ಮುಂದೆ ಪ್ರಾಮಾಣಿಕತೆಯೆಂಬ ಮೂಲಭೂತ ನಿಯಮದಿಂದ ನಾವು ಜೀವಿಸುವುದಾದರೆ, ಅತಿ ಶೀಘ್ರದಲ್ಲೇ ನಾವು ಪ್ರಗತಿ ಹೊಂದುವೆವು.

ಆದರೆ, ಇದು ನಿನಗೆ ಹೋರಾಟವೆಂದು ಕಂಡುಕೊಳ್ಳುವೆ. ನೀನು ಹೀಗೆ ಹೇಳಿಕೊಳ್ಳಬಹುದು, "ಈ ಹಿತವಚನವನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಇನ್ನು ಮುಂದೆ ನಾನು ಪ್ರಾಮಾಣಿಕನಾಗಿರುತ್ತೇನೆ" ಎಂದು. ಆದರೆ, ಒಂದು ವಾರದೊಳಗೆ, ನೀನು ಮತ್ತೆ ನಟನಾಗಲು ಶೋಧಿಸಲ್ಪಡುವುದನ್ನು ನೀನು ಕಂಡುಕೊಳ್ಳುವಿ ಮತ್ತು ದೇವರ ಹೊಗಳಿಕೆಗಿಂತ ಮನುಷ್ಯನ ಹೊಗಳಿಕೆಯನ್ನು ಕಂಡುಕೊಳ್ಳುವಿ. ಆದ್ದರಿಂದ ನೀನು ಈ ಯುದ್ಧವನ್ನು ಹೋರಾಡಿ ಜಯಿಸಲು ಮನಸ್ಸು ಮಾಡಬೇಕು.

ದೇವರಿಗೆ ದು:ಖ ತಂದಿರುವುದೇನೆಂದರೆ, ಇಪ್ಪತ್ತು ಅಥವಾ ಮೂವತ್ತು ಅಥವಾ ನಲ್ವತ್ತು ವರ್ಷಗಳಿಂದ ಪುನರ್ಜನಿಸಿದವರಾಗಿರುವ ಅನೇಕ ಕ್ರೈಸ್ತರು ಇಂದು ಆತ್ಮಿಕವಾಗಿ ಪ್ರಗತಿ ಹೊಂದಿಲ್ಲ ಏಕೆಂದರೆ, ಅವರು ಮೂಲಭೂತ ಪಾಠವಾದ ಪ್ರಾಮಾಣಿಕತೆಯನ್ನು ಕಲಿತಿಲ್ಲ. ನಮ್ಮ ಜೀವನದಲ್ಲಿ ದುರುಳತನವಿದ್ದರೆ ನಾವು ಪ್ರಗತಿ ಹೊಂದುವುದಿಲ್ಲ. ನಮ್ಮ ಪ್ರಾರ್ಥನೆಯು ಕೇಳಲ್ಪಡದು. ನಾವು ಇಡೀ ರಾತ್ರಿ ಪ್ರಾರ್ಥನಾ ಕೂಟಗಳನ್ನು ನಡೆಸಬಹುದು; ಆದರೆ ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತೇವೆ. ಮೊದಲು ನಾವು ದುರುಳತನವನ್ನು ತೊರೆಯದಿದ್ದರೆ ನಮ್ಮ ಪ್ರಾರ್ಥನೆಗಳು ಕೇಳಲ್ಪಡುವುದಿಲ್ಲ.

ಬೇರಾವುದಲ್ಲದೆ, ನಾವು ದೇವರ ಮುಂದೆ ಏನಾಗಿದ್ದೇವೆಯೋ ಅದು ಮಾತ್ರ ನಮ್ಮ ನಿಜವಾದ ಆತ್ಮಿಕ ಯೋಗ್ಯತೆ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕು (ತಿಳಿದುಕೊಳ್ಳಬೇಕು). ನಮ್ಮ ಆತ್ಮಿಕ ಸ್ಥಿತಿ, ನಮಗಿರುವ ಸತ್ಯವೇದದ ಜ್ಞಾನ ಅಥವಾ, ನಾವೆಷ್ಟು ಪ್ರಾರ್ಥನೆ ಮಾಡುತ್ತೇವೆ ಅಥವಾ ನಾವೆಷ್ಟು ಕೂಟಗಳಿಗೆ ಹೋಗುತ್ತೇವೆ ಅಥವಾ ಸಭಾ-ಹಿರಿಯರು ಅಥವಾ ಇತರರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರಿಂದ ನಿರ್ಧರಿಸಲ್ಪಡುವುದಲ್ಲ. ಬದಲಾಗಿ, ನಿನ್ನನ್ನು ನೀನೇ "ನನ್ನ ಜೀವನದ ಪ್ರತಿಯೊಂದು ಕ್ಷೇತ್ರವನ್ನು ನೋಡಬಲ್ಲ ದೇವರೇ, ನನ್ನ ಬಗ್ಗೆ ನೀನೇನು ಯೋಚಿಸುತ್ತೀ?" ಎಂದು ಕೇಳಿಕೊ, ಈ ಪ್ರಶ್ನೆಯ ಉತ್ತರವು ನೀನು ಎಷ್ಟು ಆತ್ಮಿಕವಾಗಿದ್ದೀಯ ಎಂಬುದರ ಮಾಪನವಾಗಿದೆ. ನಿತ್ಯವೂ ನಾವಿದನ್ನು ನಮಗೇ ಜ್ಞಾಪಿಸಿಕೊಳ್ಳಬೇಕು. ಇಲ್ಲದಿದ್ದರೆ, ಮತ್ತೆ ನಾವು ನಟರಾಗುವೆವು.

ನತನಯೇಲನ ಬಗ್ಗೆ ಯೇಸುವು ಹೇಳಿದ ಆ ಮಾತುಗಳನ್ನು ನಾನು ಇಷ್ಟಪಡುತ್ತೇನೆ. "ಇಗೋ, ಇವನು ನಿಜವಾಗಿಯೂ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ" (ಯೋಹಾನನು 1:47). ನನ್ನ ಮತ್ತು ನಿನ್ನ ಬಗ್ಗೆ ಯೇಸುವು ಆ ಮಾತುಗಳನ್ನು ಹೇಳಬಹುದಾದರೆ, ಬೇರೆ ಯಾವುದಕ್ಕಿಂತಲೂ ಅದು ಹೆಚ್ಚಿನ ಶಿಫಾರಸ್ಸಾಗಿರಬಹುದು. ನತಾನಯೇಲನು ಪರಿಪೂರ್ಣನಾಗಿರಲಿಲ್ಲ. ಅವನು ಅಪೂರ್ಣನಾಗಿದ್ದನು. ಆದರೆ ತನ್ನ ತಪ್ಪುಗಳ ಬಗ್ಗೆ ಅವನು ಪ್ರಾಮಾಣಿಕನಾಗಿದ್ದನು. ಅವನು ಏನಾಗಿರಲಿಲ್ಲವೋ ಅದರ ಬಗ್ಗೆ, ಅವನು ನಟಿಸಲಿಲ್ಲ. ಅಲ್ಲೇ ಅವನು ಅನನೀಯ ಮತ್ತು ಸಫೈರಳಗಿಂತ ಭಿನ್ನನಾಗಿದ್ದನು.