ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

ಆದಿಕಾಂಡ 22:2 ರಲ್ಲಿ ”ಪ್ರೀತಿ” ಎಂಬ ಪದವನ್ನು ಮೊದಲ ಬಾರಿ ಉಲ್ಲೇಖಿಸಲಾಗಿದೆ. ಇಲ್ಲಿ, ಅಬ್ರಹಾಮನು ತನ್ನ ಒಬ್ಬನೇ ಮಗನಾದ ಇಸಾಕನ ಮೇಲೆ ಪ್ರೀತಿ ಇಟ್ಟಿದ್ದನು ಎಂದು ಹೇಳಲ್ಪಟ್ಟಿದೆ. ಮುಂದುವರೆದು, ಈ ಅಧ್ಯಾಯದಲ್ಲಿ ಇಸಾಕನನ್ನು ಸರ್ವಾಂಗ ಹೋಮಕ್ಕೆ ಅರ್ಪಿಸುವುದರ ಬಗ್ಗೆ ತಿಳಿಸಲ್ಪಟ್ಟಿದೆ. ಇದು, ತಂದೆಯಾದ ದೇವರು ತನ್ನ ಒಬ್ಬನೇ ಮಗನನ್ನು ನಮ್ಮ ಪಾಪಗಳಿಗೋಸ್ಕರ ಸರ್ವಾಂಗ ಹೋಮವಾಗಿ ಅರ್ಪಿಸಲ್ಪಡುವುದಕ್ಕೆ ಹೋಲಿಕೆಯಾಗಿದ್ದು, ಶಿಲುಬೆಯ ಸ್ಪಷ್ಟ ಚಿತ್ರಣವನ್ನು ನಾವು ಇಲ್ಲಿ ನೋಡಬಹುದಾಗಿದೆ. ಇದರ ಪ್ರಕಾರವಾಗಿ, ವಚನ 2 ರಲ್ಲಿ ತಂದೆಯಾದ ದೇವರು ಕ್ರಿಸ್ತನ ಮೇಲೆ ಇಟ್ಟಿದ್ದ ಪ್ರೀತಿಯ ಚಿತ್ರಣವನ್ನು ಉಲ್ಲೇಖಿಸಲಾಗಿದೆ. ”ಪ್ರೀತಿ” ಎಂಬ ಪದವು ಮತ್ತೇ ಆದಿಕಾಂಡ 24:67 ರಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಸತ್ಯವೇದದಲ್ಲಿ ಇದು ಎರಡನೇ ಬಾರಿ ಪ್ರಸ್ತಾಪಿಸಲ್ಪಟ್ಟಿದ್ದಾಗಿದೆ. ಇಲ್ಲಿ, ಇಸಾಕನು ರಬೆಕ್ಕಳ ಮೇಲೆ ಇಟ್ಟಿದ್ದ ಪ್ರೀತಿಯನ್ನು, ಅಂದರೆ ಗಂಡನು ತನ್ನ ಹೆಂಡತಿಯ ಮೇಲೆ ಇಡುವ ಪ್ರೀತಿಯ ಬಗ್ಗೆ ತಿಳಿಸುತ್ತದೆ. ಇಲ್ಲಿ ನಮಗೆ ಒಂದು ಸ್ಪಷ್ಟ ಚಿತ್ರಣ ಗೋಚರವಾಗುತ್ತದೆ, ಅದೇನೆಂದರೆ, ಇನ್ನೂ ಈ ಅಧ್ಯಾಯದ ಮುಂದುವರೆದ ಭಾಗವು ಸಹ, ಕ್ರಿಸ್ತನು ತನ್ನ ಸಭೆಯ ಮೇಲೆ ಇಟ್ಟಿರುವ ಪ್ರೀತಿಯನ್ನು ಇನ್ನೂ ಸುಂದರವಾಗಿ ವರ್ಣಿಸಲ್ಪಟ್ಟಿದೆ ಎಂಬುದಾಗಿ. ಹೊಸ ಒಡಂಬಡಿಕೆಯಲ್ಲಿ ಈ ಎರಡು ವಿಷಯಗಳನ್ನು ಯೋಹಾನ 15:9 ರಲ್ಲಿ ಕರ್ತನು ಪ್ರಸ್ತಾಪಿಸಿದ್ದಾನೆ. ಈ ವಾಕ್ಯ ಈ ರೀತಿ ವಿವರಿಸಲ್ಪಟ್ಟಿದೆ, ”ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ( ಅಂದರೆ, ಆದಿಕಾಂದ 22:2 ರಲ್ಲಿ ಮಗನ ಮೇಲೆ ತಂದೆಯು ಇಟ್ಟಿರುವಂತ ಪ್ರೀತಿಯನ್ನು ವರ್ಣಿಸಿರುವ ರೀತಿ) ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ” (ಆದಿಕಾಂಡ 24:67 ರಲ್ಲಿ ಉದಾಹರಿಸಲ್ಪಟ್ಟಂತೆ ವರನು ವಧುವಿನ ಮೇಲೆ ಇಟ್ಟಿದ್ದ ಪ್ರೀತಿಯು ಕ್ರಿಸ್ತನು ಪಾಪಿಗಳಿಗೋಸ್ಕರವಾಗಿ ಇಟ್ಟಿರುವ ಪ್ರೀತಿಗೆ ಹೋಲುತ್ತದೆ). ಹಳೆ ಒಡಂಬಡಿಕೆಯಲ್ಲಿನ ವಿಶ್ಲೇಷಣೆಯು ಸಹ, ದೇವರು ಮನುಷ್ಯನ ಮೇಲೆ ಇಟ್ಟಿರುವಂತ ಅಪರಿಮಿತ ಪ್ರೀತಿಯನ್ನು ಪ್ರತಿಬಿಂಬಿಸಿದೆ.

ಆದಿಕಾಂಡ 24ನೇ ಅಧ್ಯಾಯವನ್ನು ನೋಡುವವರಾಗೋಣ ಮತ್ತು ಈ ಅಧ್ಯಾಯದಲ್ಲಿನ ಚಿತ್ರಣವು ಇಸಾಕ ಮತ್ತು ರೆಬೆಕ್ಕಳ ನಡುವಿನ ಸಂಬಂಧವನ್ನು ತಿಳಿಸುವಂತದ್ದಾಗಿದೆ, ಈ ರೀತಿಯಾಗಿ ಕರ್ತನು ನಮ್ಮ ಮೇಲೆ ಇಟ್ಟಿರುವ ಅತಿಯಾದ ಪ್ರೀತಿಯ ಬಗ್ಗೆ ಇರುವ ಕೆಲ ಗುಣಲಕ್ಷಣಗಳನ್ನು ನಾವು ನೋಡುವಂತೆ ಈ ಉದಾಹರಣೆಗಳನ್ನು ಸತ್ಯವೇದದಲ್ಲಿ ಉಪಯೋಗಿಸಿಕೊಂಡಿದ್ದಾನೆ. ದೇವರು ನಮ್ಮನ್ನು ಎಷ್ಟು ಅಪರಿಮಿತವಾಗಿ ಪ್ರೀತಿಸುತ್ತಾನೆ ಎಂದು ನಮಗೆ ತೋರಿಸಲು ಅನುಕೂಲವಾಗುವಂತೆ, ಆತನು ಗಂಡ ಮತ್ತು ಹೆಂಡತಿಯರ ಸಂಬಂಧವನ್ನು ಉದಾಹರಣೆಯಾಗಿ ಉಪಯೋಗಿಸಿರುವುದು ತುಂಬಾ ಅರ್ಥಪೂರ್ಣವಾಗಿದೆ. ಗಂಡ ಮತ್ತು ಹೆಂಡತಿಯರ ಸಂಬಂಧದ ನಡುವಿನ ಒಗ್ಗಟ್ಟು, ಈ ಲೋಕದಲ್ಲಿರುವ ಎಲ್ಲಾ ಸಂಬಂಧಗಳಿಗಿಂತ ಹೆಚ್ಚು ಸಲಿಗೆ ಮತ್ತು ಅನ್ಯೋನ್ಯತೆಯಿಂದ ಕೂಡಿದ್ದಾಗಿದೆ. ದೇವರು ಸತ್ಯವೇದದಲ್ಲಿ ಇರಿಸಿರುವ ಈ ಹೊಲಿಕೆಯನ್ನು ಮತ್ತು ಉದಾಹರಣೆಯನ್ನು ನಾವು ಗ್ರಹಿಸಿಕೊಳ್ಳದೆ ಹೋಗುವುದು ಅಜ್ನಾನದ ಕೆಲಸವಾಗಿದೆ. ಈ ಉದಾಹರೆಣೆಯು ದೇವರಿಂದಾದ ಆಯ್ಕೆ ಎಂದು ಎಫೆಸ 5:21-23 ರಲ್ಲಿ ಉಲ್ಲೇಖಿಸಿರುವ ವಾಕ್ಯದ ರೀತಿಯ ಹೊಸ ಒಡಂಬಡಿಕೆ ಸಂದೇಶಗಳಿಂದ ಧೃಢಪಟ್ಟಿದೆ. ಕರ್ತನು ನಮ್ಮೆಲ್ಲರೊಟ್ಟಿಗೆ ವೈಯುಕ್ತಿಕವಾಗಿ ಸಲಿಗೆಯಿಂದ, ಹತ್ತಿರವಾಗಿ ಮತ್ತು ಹೆಚ್ಚು ಅನ್ಯೋನ್ಯತೆಯಿಂದ ಇರಲು ಬಯಕೆಯುಳ್ಳವನಾಗಿದ್ದಾನೆ ಎಂದು ಸತ್ಯವೇದದಲ್ಲಿನ ಹಲವಾರು ಉದಾಹರಣೆಗಳು ಸ್ಪಷ್ಟವಾಗಿ ಒತ್ತಿ ಹೇಳಲ್ಪಟ್ಟಿವೆ ಮತ್ತು ನಾವು ಸಹ ಆತನೊಟ್ಟಿಗೆ ಹಾಗೆಯೇ ಇರಬೇಕು ಎಂಬುದನ್ನು ಸಹ ಆತನು ಬಯಸುತ್ತಾನೆ. ಆದಿಕಾಂಡ 24 ರಲ್ಲಿ ದೈವಿಕತೆಯನ್ನು ಹುಡುಕುವಂತಹ ಸಾಂಕೇತಿಕ ಕಥೆಗಳನ್ನು ನಾವು ನೋಡಬಹುದಾಗಿದೆ. ಏಕೆಂದರೆ ದೇವರು ಮನುಷ್ಯನೊಟ್ಟಿಗೆ ಈ ರೀತಿಯ ಸಂಬಂಧವನ್ನು ಹೊಂದಲು ಬಯಸುತ್ತಾನೆ. ಅಲ್ಲಿ ಅಬ್ರಹಾಮನು ಒಂದು ರೂಪವಾಗಿ ಕಾಣುತ್ತಾನೆ ಅಥವಾ ತಂದೆಯಾದ ದೇವರ ಪ್ರತಿಬಿಂಬವಾಗಿ ಕಾಣುತ್ತಾನೆ, ಅಬ್ರಹಾಮನ ಸೇವಕನು ಪವಿತ್ರಾತ್ಮನ ರೀತಿಯಲ್ಲಿ ಮತ್ತು ಇಸಾಕನು ದೇವರ ಮಗನ ರೀತಿಯಲ್ಲಿ, ರೆಬೆಕ್ಕಳು ಹೊರಗಿನ/ಅನ್ಯದೇಶಿಯ ಸ್ಥಾನವನ್ನು ಅಲಂಕರಿಸಿರುವ ರೀತಿಯಲ್ಲಿರುವುದನ್ನು ನಾವು ಕಂಡುಕೊಳ್ಳಬಹುದು. ಅದರಂತೆ ವಿಮೋಚನೆಗೊಳ್ಳದಂತ ಮನುಷ್ಯನು(ಅಂದರೆ ರೆಬೆಕ್ಕಳು) ದೂರದ ದೇಶದಲ್ಲಿದ್ದು, ಈತನನ್ನು ಪವಿತ್ರಾತ್ಮನು(ಅಂದರೆ ಅಬ್ರಹಾಮನ ಸೇವಕನು) ಕ್ರಿಸ್ತನ ಕಡೆ (ಅಂದರೆ ಇಸಾಕನ ಕಡೆ) ನಡೆಸಲು ಹೊರಟಿರುವ ರೀತಿಯ ಚಿತ್ರಣದಂತೆ ತೋರುತ್ತದೆ. ಅಬ್ರಹಾಮನ ಸೇವಕನ ನಡವಳಿಕೆಯಲ್ಲಿ (ಈ ಕಾರ್ಯದಲ್ಲಿ ಅಬ್ರಹಾಮ ಮತ್ತು ಇಸಾಕನ ಪ್ರತಿನಿಧಿಯಾಗಿರುತ್ತಾನೆ) ಮತ್ತು ಇಸಾಕನು ರೆಬೆಕ್ಕಳ ಕಡೆಗೆ ಹೊಂದಿರುವ ನಡವಳಿಕೆಯಲ್ಲಿ, ಕ್ರಿಸ್ತನು ನಮಗೋಸ್ಕರವಾಗಿ ಇಟ್ಟಿರುವ ಪ್ರೀತಿಯ ಗುಣಲಕ್ಷಣವನ್ನು ನಾವು ಸೂಕ್ಷ್ಮವಾಗಿ ಗ್ರಹಿಸಿಕೊಳ್ಳಬಹುದು.

ಮೊದಲನೆಯದಾಗಿ, ಆದಿಕಾಂಡ 24ನೇ ಅಧ್ಯಾಯ 22 ಮತ್ತು 53 ನೇ ವಚನದಲ್ಲಿ ನಾವು ನೋಡುವುದೇನೆಂದರೆ, ಅಬ್ರಹಾಮನ ಸೇವಕನು ತನ್ನ ಒಡೆಯನ ಐಶ್ವರ್ಯದಿಂದ ರೆಬೆಕ್ಕಳಿಗೆ ಕಾಣಿಕೆಗಳನು ಕೊಡುತ್ತಾನೆ ಎಂಬುದಾಗಿ. ಇದು ನಮಗೆ, ದೇವರ ಹೃದಯದೊಳಗಿರುವ ಒಳನೋಟವನ್ನು ತೋರಿಸುತ್ತದೆ. ಆತನು ನಮ್ಮ ಬಳಿಗೆ ಬರುವಾಗ, ಬೇಡಿಕೆಯಿಟ್ಟು ಬರುವುದಿಲ್ಲ, ಕೊಡುವುದಕ್ಕೆ ಬರುತ್ತಾನೆ. ಒಳ್ಳೆ ಗಂಡನು ತನ್ನ ಹೆಂಡತಿಯೊಂದಿಗೆ ಎಲ್ಲವನ್ನು ಹಂಚಿಕೊಳ್ಳಲು ಬಯಸುವಂತೆ, ದೇವರು ಸಹ ತನ್ನ ಎಲ್ಲಾ ಬಯಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ನಮ್ಮಲ್ಲಿ ಅನೇಕರು ತಿಳಿದುಕೊಳ್ಳುವುದೇನೆಂದರೆ, ನಮ್ಮನ್ನು ನಾವು ಸಂಪೂರ್ಣವಾಗಿ ದೇವರಿಗೆ ಒಪ್ಪಿಸಿಕೊಟ್ಟರೆ, ಆತನು ನಮ್ಮ ಮೇಲೆ ಅನೇಕ ಬೇಡಿಕೆಗಳನ್ನು ಹಾಕುತ್ತಾನೆ ಹಾಗೂ ನಮ್ಮ ಜೀವಿತವು ಬೇಸರದಿಂದಿರುತ್ತದೆ ಎಂಬುದಾಗಿ. ಇದರಲ್ಲಿ ಇದ್ದಂತೆ, ಅನೇಕ ಪದಗಳನ್ನು ನಾವು ಹೇಳದೆ ಇದ್ದರೂ, ನಾವು ಇದೇ ಕಾರಣದಿಂದ ನಮ್ಮನ್ನು ನಾವು ದೇವರಿಗೆ ಒಪ್ಪಿಸಿಕೊಡಲು ಹಿಂಜರಿಯುತ್ತೇವೆ. ಇನ್ನೂ ಯೇಸು ನಮಗೆ ಸ್ಪಷ್ಟವಾಗಿ ಹೇಳಿರುವುದೇನೆಂದರೆ, ನಿಜವಾದ ಕಳ್ಳನು ನಮ್ಮಲ್ಲಿರುವಂತದ್ದನ್ನು ತೆಗೆದುಕೊಂಡು ಹೋಗಲು ಬರುತ್ತಾನೆ ಎಂಬುದಾಗಿ. ಆ ಕಳ್ಳನು ಸೈತಾನನಾಗಿದ್ದಾನೆ (ಯೋಹಾನ 10:10). ಆದರೆ, ಬಹಳ ಕಡಿಮೆ ಜನ ಇದನ್ನು ನಂಬುವವರಾಗುತ್ತಾರೆ. ನಾವು ನಿಜವಾಗಿಯು ಕರ್ತನಾದ ಯೇಸು ಕ್ರಿಸ್ತನು ತನ್ನಲ್ಲಿರುವುದನ್ನು ನಮಗೆ ಕೊಡುವುದಕ್ಕೆ ಬಂದನೆಂದು ನಂಬಿದರೆ, ನಮ್ಮ ಜೀವಿತದಲ್ಲಿ ಎಲ್ಲವನ್ನು ಆತನಿಗೆ ಯಾವ ಅಭ್ಯಂತರವಿಲ್ಲದೆ, ಯಾವುದಕ್ಕೂ ಹಿಂಜರಿಯದೇ ಸಂಪೂರ್ಣವಾಗಿ ಒಪ್ಪಿಸಿಕೊಡುತ್ತೇವೆ.

ದೇವರು ಒಬ್ಬ ಮನುಷ್ಯನಿಗೆ ವಿಧಯನಾಗುವಂತೆ ಅಪ್ಪಣೆ ಕೊಡಬಹುದು, ಆದರೆ ಆತನು ಎಂದಿಗೂ ಮತ್ತು ಯಾರಿಗೂ ವಿಧಯರಾಗುವಂತೆ ಒತ್ತಾಯಿಸುವುದಿಲ್ಲ. ಆತನು ಮನುಷ್ಯರಿಗೆ ತಾನೇ ಕೊಡಲ್ಪಟ್ಟಿರುವ ಸ್ವತಂತ್ರ ಚಿತ್ತವನ್ನು ಗೌರವಿಸುತ್ತಾನೆ

ಒಬ್ಬ ಪಾಸ್ಟರ್ ಹೇಳಿದ ಕಥೆಯು ನನಗೆ ನೆನೆಪಿದೆ, ಅದೇನೆಂದರೆ, ಈ ಪಾಸ್ಟರ್ ರವರು ಒಬ್ಬ ವೃದ್ದ ಬಡ ಹೆಂಗಸನ್ನು ಭೇಟಿ ಮಾಡಲು ತೆರೆಳಿದ್ದರು. ಕಾರಣವೇನೆಂದರೆ, ಉಡುಗೊರೆಯನ್ನು ಆಕೆಗೆ ಕೊಡುವುದರ ಜೊತೆಗೆ, ಆಕೆಯ ಮನೆಯ ಬಾಡಿಗೆಯನ್ನು ಪಾವತಿಸಲು. ಅವರು ಆಕೆಯ ಮನೆಯ ಹತ್ತಿರ ಹೋಗಿ, ಬಾಗಿಲನ್ನು ತಟ್ಟುತ್ತಾರೆ ಮತ್ತು ಕಾಯುತ್ತಾರೆ, ಮತ್ತೇ ತಟ್ಟುತ್ತಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಹಾಗಾಗಿ ಆ ಪಾಸ್ಟರ್ ರವರು ಬಾಗಿಲು ತೆರೆಯುವುದು ತಡವಾಗಿದ್ದರಿಂದ ಅವರು ಅಲ್ಲಿಂದ ಹೊರಟು ಬಿಡುತ್ತಾರೆ. ಕೆಲವು ದಿನಗಳ ನಂತರ, ಆಕೆಯನ್ನು ರಸ್ತೆ ಬದಿಯಲ್ಲಿ ಭೇಟಿಯಾದಾಗ, ಹೀಗೆ ಕೇಳುತ್ತಾರೆ, ”ನಾನು ಹಿಂದೆ ಒಂದು ದಿನ ಉಡುಗೊರೆಯೊಂದಿಗೆ ನಿಮ್ಮನ್ನು ಭೇಟಿಯಾಗಲು ಬಂದಿದ್ದೆ, ಆದರೆ ನಿಮ್ಮ ಮನೆ ಬಾಗಿಲು ಮುಚ್ಚಿತ್ತು ಮತ್ತು ಯಾವುದೇ ಉತ್ತರ ನನಗೆ ಒಳಗಿನಿಂದ ದೊರಕಲಿಲ್ಲ'' ಎಂದು ಹೇಳಿದರು. ಆಗ ಆ ಹೆಂಗಸು ”ಹೌದಾ” ಎಂದು ಹೇಳಿ, ''ನನ್ನನ್ನು ಕ್ಷಮಿಸಿ, ನಾನು ಒಳಗಡೆಯೇ ಇದ್ದೆ, ಆದರೆ ಮನೆಯ ಯಜಮಾನನು ಬಾಡಿಗೆಯನ್ನು ಕೇಳಲು ಬಾಗಿಲು ತಟ್ಟುತ್ತಿರಬಹುದೆಂದು ನೆನೆಸಿದೆನು. ಹಾಗಾಗಿ ನಾನು ಬಾಗಿಲನ್ನು ತೆರೆಯಲಿಲ್ಲ” ಎಂಬುದಾಗಿ ಹೇಳಿದಳು. ”ಸಹೋದರ ಮತ್ತು ಸಹೋದರಿಯರೆ, ಕರ್ತನಾದ ಯೇಸುವು ಬಾಡಿಗೆಯನ್ನು ತೆಗೆದುಕೊಳ್ಳಲು ಬರುವುದಿಲ್ಲ! ಆತನು ತನಗಿರುವುದನ್ನೆಲ್ಲಾ ಕೊಡುವುದಕ್ಕೆ ಬಂದಿರುತ್ತಾನೆ. ಕಲ್ಪಿಸಿಕೊಳ್ಳಲು ಆಸಾಧ್ಯವಾದ ರೀತಿಯಲ್ಲಿ ಆತನು ನಮಗೆ ಐಶ್ವರ್ಯವನ್ನು ತರಲು ಬಯಸಿದ್ದಾನೆ. ಆತನಿಗೆ ಬಾಗಿಲು ತೆರೆಯದೆ ಇರುವಂತದ್ದು ಎಂಥಹ ಮೂರ್ಖತನವಾಗಿದೆ. ನಮ್ಮ ಜೀವಿತವನ್ನು ಆತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಡದೆ ಇರುವಂತದ್ದು ಎಂಥಹ ಮೂರ್ಖತನವಾಗಿದೆ.

ಅಬ್ರಹಾಮನ ಸೇವಕನನ್ನು ಮತ್ತೇ ನೋಡಿರಿ. ಈ ಕಥೆಯ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ, ಇಸಾಕನಿಗಾಗಿ ರೆಬೆಕ್ಕಳು ದೇವರೆ ಮಾಡಿದಂತ ಆಯ್ಕೆ ಎಂಬುದು ತಿಳಿದಿದ್ದರೂ, ಆ ಸೇವಕನು ರೆಬೆಕ್ಕಳನ್ನು ಇಸಾಕನ ಜೊತೆ ಹೋಗಲು ಒತ್ತಾಯ ಮಾಡಲಿಲ್ಲ. ಆತನು ಆಕೆಯ ಸ್ವಂತ ಚಿತ್ತವನ್ನು ಗೌರವಿಸಿದನು ಮತ್ತು ತನ್ನ ಚಿತ್ತದಂತೆ ಆಕೆಯು ಹೋಗುವುದಕ್ಕೆ ಇಚ್ಚಿಸಿದಾಗ ಆತನು ಕರೆದುಕೊಂಡು ಹೋದನು (ಆದಿಕಾಂಡ 24: 54-59). ಈ ಒಂದು ಗುಣಲಕ್ಷಣವು ಸಹ ಕ್ರಿಸ್ತನು ನಮ್ಮ ಮೇಲೆ ಇಟ್ಟಿರುವಂತ ಪ್ರೀತಿಯನ್ನು ತೋರಿಸುತ್ತದೆ. ನಾವು ಈ ಅಧ್ಯಾಯವನ್ನು ಒಟ್ಟಾರೆಯಾಗಿ ಮತ್ತು ಸಂಕ್ಷೀಪ್ತವಾಗಿ ನೋಡುವಾಗ, ದೇವರು ಮನುಷ್ಯನ ಸ್ವತಂತ್ರ ಆಯ್ಕೆಯನ್ನು ಗೌರವಿಸುತ್ತಾನೆ ಎಂಬುದಾಗಿ ತಿಳಿಯುತ್ತದೆ. ದೇವರ ಪ್ರೀತಿಯು ಬಲವಂತವಿಲ್ಲದ್ದಾಗಿರುತ್ತದೆ. ಆತನು ನಿಮ್ಮನ್ನು ಎನನ್ನಾದಾರೂ ಮಾಡುವಂತೆ ಒತ್ತಾಯಿಸುವುದಿಲ್ಲ. ಈ ಲೋಕದಲ್ಲಿರುವ ಮನುಷ್ಯರು, ಹೌದು, ಕ್ರೈಸ್ತ ನಾಯಕರೂ ಸಹ, ನಿಮ್ಮ ಚಿತ್ತದ ವಿರುದ್ದವಾಗಿ ಅನೇಕ ಸಂಗತಿಗಳನ್ನು ಮಾಡುವಂತೆ ನಿಮ್ಮ ಮೇಲೆ ಒತ್ತಡ ಹೇರಬಹುದು, ಆದರೆ ದೇವರು ನಿಮಗೆ ಎಂದಿಗೂ ಮತ್ತು ಯಾವುದಕ್ಕೂ ಒತ್ತಾಯ ಮಾಡುವುದಿಲ್ಲ. (ಮುಂದುವರೆದಂತೆ, ಮನುಷ್ಯನು ಯಾರೇ ಆಗಲಿ, ಅವನು ದೇವರ ರೀತಿ ಯಾಗುವುದಕ್ಕೆ ಪ್ರಯತ್ನಿಸುತ್ತಿದ್ದರೆ, ಈ ವಿಷಯದಲ್ಲಿ ಹಿಂಬಾಲಿಸುವವನಾಗಿರುತ್ತಾನೆ). ಕರ್ತನು ನಿಮ್ಮನ್ನು ಎಂದಿಗೂ ಸತ್ಯವೇದ ಓದುವಂತೆ ಒತ್ತಾಯಿಸುವುದಿಲ್ಲ, ಪ್ರಾರ್ಥನೆ ಮಾಡುವಂತೆ ಒತ್ತಾಯಿಸುವುದಿಲ್ಲ, ಆತನಿಗೆ ಸಾಕ್ಷಿಗಳಾಗಿರುವಂತೆಯೂ ಸಹ ಒತ್ತಾಯಿಸುವುದಿಲ್ಲ. ದೇವರು ಯಾವುದೇ ಪಾಪಿಗೂ ಸಹ ತನ್ನ ಕಡೆಗೆ ತಿರುಗಿಕೊಳ್ಳುವಂತೆ ಒತ್ತಾಯಿಸುವುದಿಲ್ಲ. ಅದೇ ರೀತಿ ಯಾವುದೇ ವಿಶ್ವಾಸಿಗೂ ಸಹ ತನಗೆ ವಿಧಯರಾಗುವಂತೆಯೂ ಸಹ ಒತ್ತಾಯಿಸುವುದಿಲ್ಲ. ದೇವ ದರ್ಶನದ ಗುಡಾರದ ಬಗ್ಗೆ ಮೋಶೆಗೆ ದೇವರು ಸೂಚನೆ ಕೊಡುವಂತ ಸಂದರ್ಭದಲ್ಲಿ, ದೇವರು ಹೇಳಿದ್ದೇನೆಂದರೆ, ಯಾರು ಹೃದಯಪೂರ್ವಕವಾಗಿ ಮತ್ತು ಮನ:ಪೂರ್ವಕವಾಗಿ ಕಾಣಿಕೆಯನ್ನು ಕೊಡಲು ಬಯಸುತ್ತಾರೋ, ಅಂಥವರಿಂದ ಮಾತ್ರ ಕಾಣಿಕೆಯನ್ನು ತೆಗೆದಿಕೋ ಎಂಬುದಾಗಿ ( ವಿಮೋಚನಕಾಂಡ 25:2). ಈ ಒಂದು ತತ್ವ ಹೊಸ ಒಡಂಬಡಿಕೆಯಲ್ಲಿಯೂ ಸಹ ಒತ್ತಿ ಹೇಳಲ್ಪಟ್ಟಿದೆ(2 ಕೊರಿಂಥ 9:7). ಅದುಅಲ್ಲದೇ, ಈ ಒಂದು ತತ್ವ ಇಡೀ ಸತ್ಯವೇದದಲ್ಲಿಯೇ ಪದೇ ಪದೇ ಉಲ್ಲೇಖಿಸಲ್ಪಟ್ಟಿದೆ. ದೇವರು ಒಬ್ಬ ಮನುಷ್ಯನಿಗೆ ವಿಧಯನಾಗುವಂತೆ ಅಪ್ಪಣೆ ಕೊಡಬಹುದು, ಆದರೆ ಆತನು ಎಂದಿಗೂ ಮತ್ತು ಯಾರಿಗೂ ವಿಧಯರಾಗುವಂತೆ ಒತ್ತಾಯಿಸುವುದಿಲ್ಲ. ಆತನು ಮನುಷ್ಯರಿಗೆ ತಾನೇ ಕೊಡಲ್ಪಟ್ಟಿರುವ ಸ್ವತಂತ್ರ ಚಿತ್ತವನ್ನು ಗೌರವಿಸುತ್ತಾನೆ. ಹಾಗಾದರೆ, ನಿಮಗೆ ಮತ್ತು ನನಗೆ ದೇವರ ಇಂತಹ ಪ್ರೀತಿಯ ಬಗ್ಗೆ ಭಯಪಡುವುದರ ಅಗತ್ಯತೆಯಾದರೂ ಏನಿದೆ?