ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
WFTW Body: 
(

ಜನವರಿ-2006 ರ ತಮಿಳುನಾಡಿನ ತೂತ್ತುಕ್ಕುಡಿಯಲ್ಲಿ ನಡೆದ ಕೂಟಗಳಲ್ಲಿ ಕೊಟ್ಟಂತ ಸಂದೇಶಗಳ ಸಾರಂಶಗಳು)

  • 1. ನಾವು ನಿಜವಾಗಿಯೂ “ಕ್ರಿಸ್ತನ ರಕ್ತದಿಂದ ನೀತಿವಂತರಾಗಿದ್ದರೆ” (ರೋಮಪುರದವರಿಗೆ 5:9) ಮತ್ತು ನಾವು ಕ್ರಿಸ್ತನಲ್ಲಿ “ಅಂಗೀಕರಿಸಲ್ಪಟ್ಟಿದ್ದರೆ” (ಎಫೆಸದವರಿಗೆ 1:6 - ಕೆ.ಜೆ.ವಿ ಬೈಬಲ್), ಆಗ ನಮ್ಮ ಹಿಂದಿನವುಗಳನ್ನು ದೇವರು ಎಂದಿಗೂ ನೆನಪಿಗೆ ತರುವುದಿಲ್ಲ (ಇಬ್ರಿಯದವರಿಗೆ 8:12). ಇಲ್ಲದಿದ್ದರೆ, ನಮ್ಮ ಹಿಂದಿನವುಗಳು ದೇವರ ಕಣ್ಣಿನಲ್ಲಿ ಪಾಪವುಳ್ಳದ್ದಾಗಿದ್ದು, ಇವು ಹಾಗೆಯೇ ಉಳಿದುಕೊಳ್ಳುತ್ತವೆ. ಆದ್ದರಿಂದ ನಾವು ಬೇಗನೆ ಮಾನಸಾಂತರ (ಪಶ್ಚಾತಾಪ) ಹೊಂದಬೇಕು ಮತ್ತು ಶುದ್ಧಮನಸ್ಸಾಕ್ಷಿಯನ್ನು ಇಟ್ಟುಕೊಳ್ಳಬೇಕು ಮತ್ತು ಎಲ್ಲಾ ಸಮಯದಲ್ಲಿ ಎಲ್ಲರನ್ನು ಬೇಗನೆ ಕ್ಷಮಿಸಬೇಕು (ಮತ್ತಾಯ 18:23-25 ನೋಡಿ)
  • 2. ನಮ್ಮ ಜೀವಿತದಲ್ಲಿ ತುಂಬಾ ಅಗತ್ಯವಾದ ಸಂಗತಿಯೇನೆಂದರೆ, ಎಲ್ಲಾ ಸಮಯದಲ್ಲಿಯೂ ಕರ್ತನಾದ ಯೇಸುವಿಗೆ ಕಿವಿಗೊಡುವುದಾಗಿದೆ (ಲೂಕ 10:38 & 42 ನೋಡಿ). ಈ ರೀತಿಯಾಗಿ ಮಾತ್ರವೇ ನಮ್ಮ ಜೀವಿತದಲ್ಲಿನ ಪ್ರತಿಯೊಂದು ವಿಗ್ರಹವು ನಾಶವಾಗಬಲ್ಲದು (ಯೆಶಾಯ 30:21,22 ನೋಡಿ).
  • 3. “ದೀನತೆಯ ಬಹುದೊಡ್ಡದಾದ ಪುರಾವೆಯೆಂದರೆ ದೇವರಿಗೆ ಸಂಪೂರ್ಣವಾಗಿ ವಿಧಯರಾಗುವುದಾಗಿದೆ" (ಫಿಲಿಪ್ಪಿಯವರಿಗೆ 2:8), ಇದು ಯಾವಾಗಲೂ ನಮ್ಮನ್ನು ನಾವು ನಿರಾಕರಿಸುವುದರ (ಸ್ವಾರ್ಥಕ್ಕೆ ಸಾಯುವುದರ) ಮೂಲಕ ಬರುತ್ತದೆ (2 ಕೊರಿಂಥದವರಿಗೆ 4:10).
  • 4. ನಿಮ್ಮ ಹೆಂಡತಿಯು ಬಲಹೀನತೆಯುಳ್ಳ ಪಾತ್ರೆಯೆಂದು ಎಲ್ಲಾ ಸಮಯದಲ್ಲಿ ಒಪ್ಪಿಕೊಂಡು ನಿಮ್ಮ ಹೆಂಡತಿಯ ಸಂಗಡ ವಿವೇಕದಿಂದ ಜೀವಿಸಬೇಕು (1 ಪೇತ್ರ 3:7). ಗಂಡನು ಹೆಂಡತಿಯ ಶಿರಸ್ಸಾಗಿರಬೇಕು. ಇದರ ಅರ್ಥವೇನೆಂದರೆ ತನ್ನ ಮಾದರಿಯಿಂದ ತನ್ನ ಹೆಂಡತಿಯನ್ನು ಮುನ್ನಡಸಬೇಕು ಮತ್ತು ಆಕೆಯ ಜೀವಿತದ ಪ್ರತಿಯೊಂದು ಭಾಗವನ್ನು ಕಾಳಜಿ ವಹಿಸಬೇಕು (ಮೆದಳು ಹೇಗೆ ಇಡೀ ದೇಹವನ್ನು ಕಾಳಜಿ ವಹಿಸುತ್ತದೋ ಹಾಗೆ).
  • 5. ಮೋಶೆಯ ಪೋಷಕರು ಆತನು ಮಗುವಾಗಿದ್ದಾಗ ಏನು ತಿಳಿಸಿದರೋ, ಅದನ್ನೇ ನಮ್ಮ ಮಕ್ಕಳಿಗೂ ಬೋಧಿಸಬೇಕು : ಲೋಕದ ಗೌರವದ ಹಿಂದೆ ಎಂದಿಗೂ ಹೋಗಬಾರದೆಂದು ಅಥವಾ ಪಾಪದ ಇಚ್ಚೆಯನ್ನು ನೆರವೇರಿಸಬಾರದೆಂದು ಅಥವಾ ಲೋಕದ ಐಶ್ವರ್ಯವನ್ನು ಎಂದಿಗೂ ಹುಡುಕಬಾರದೆಂದು ಬೋಧಿಸಬೇಕು. ಆದರೆ ಕೆಟ್ಟ ರೀತಿಯಾಗಿ ನಡೆಸಿಕೊಳ್ಳುವುದರಲ್ಲಿ ಯಾತನೆ ಅನುಭವಿಸುವುದನ್ನು ಮತ್ತು ಕ್ರಿಸ್ತನಿಗೋಸ್ಕರ ನಿಂದೆಗೊಳಗಾಗಲು ಸಿದ್ಧವಿರುವುದನ್ನು ಕಲಿಸಬೇಕು. ಮೋಶೆಯು ತಾನು 40 ವರ್ಷ ವಯಸ್ಸಿನವನಾಗಿದ್ದಾಗ್ಯೂ ಸಹ ಇವುಗಳನ್ನು ನೆನಪಿಸಿಕೊಂಡನು (ಇಬ್ರಿಯದವರಿಗೆ 11:24-26).
  • 6. ಕರ್ತನು ತನ್ನ ಆಜ್ಞೆಗಳನ್ನು ಮೊದಲು ನಮ್ಮ ಮನಸ್ಸಿನಲ್ಲಿ ಬರೆದು, ಆತನ ಚಿತ್ತವನ್ನು ಮಾಡುವಂತ ಬಯಕೆಯನ್ನು ನಮಗೆ ಕೊಡುತ್ತಾನೆ. ನಂತರ ನಮ್ಮ ಹೃದಯದ ಮೇಲೆ ಇದನ್ನು ಬರೆದು, ಆತನ ಚಿತ್ತವನ್ನು ಮಾಡಲು ನಮಗೆ ಸಾಮರ್ಥ್ಯವನ್ನು ಸಹ ಕೊಡುವನು (ಇಬ್ರಿಯದವರಿಗೆ 8:10 ; ಫಿಲಿಪ್ಪಿಯವರಿಗೆ 2:12,13). ಆತನು ಮೊದಲನೆಯದನ್ನು ನಮ್ಮಲ್ಲಿ ಮಾಡಿದರೆ, ಆತನು ಎರಡನೆಯದನ್ನು ಸಹ ಮಾಡುತ್ತಾನೆ ಎಂಬುದನ್ನು ನಾವು ನಂಬಬೇಕು.
  • 7. ಕ್ರಿಸ್ತನ ದೇಹದಲ್ಲಿ ಪ್ರತಿ ಸದಸ್ಯರು ಬೇರೆಯವರಿಗೋಸ್ಕರ ಕಾಳಜಿ ವಹಿಸುವಂತ ಮತ್ತು ಬೇರೆಯವರನ್ನು ಉತ್ತೇಜಿಸುವಂತ ಒಗ್ಗಟ್ಟಾದ “ಕುಟುಂಬದಂತೆ” ಸಭೆಯನ್ನು ಕಟ್ಟಲು, ನಾವು ಪ್ರತಿಯೊಬ್ಬರು ನಮ್ಮ ಸ್ವಂತ ಪಾತ್ರವನ್ನು ನಂಬಿಗಸ್ಥಿಕೆಯಿಂದ ನಿರ್ವಹಿಸಬೇಕು (1 ಕೊರಿಂಥದವರಿಗೆ 12:24-27).
  • 8. “ನಮ್ಮ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವವರಾಗಿರಬೇಕು” (ಫಿಲಿಪ್ಪಿಯವರಿಗೆ 3:13). ಇದರ ಅರ್ಥವೇನೆಂದರೆ, ಪ್ರತಿದಿನ ನಾವು ಇಲ್ಲಿಯವರೆಗೆ ಕರ್ತನಿಗಾಗಿ ಏನು ಮಾಡಿಲ್ಲದ ಹಾಗೇ ನಾವು ಜೀವಿಸಬೇಕು, ಆದರೆ ಆ ದಿನ ನಾವು ಏನು ಮಾಡಬೇಕು ಎಂಬುದನ್ನು ಆತನು ಬಯಸುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ತವಕಿಸಬೇಕು.
  • 9. ಜಯ ಹೊಂದಿದವರು “ಗಾಜಿನ ಸಮುದ್ರದ” ಬಳಿ ನಿಂತಿರುವುದರ (ತೆರೆಯೊಂದಿಗೆ ಇಲ್ಲದ ಸಮುದ್ರ - ಪ್ರಕಟಣೆ 15:2) ಚಿತ್ರಣವೇನೆಂದರೆ - “ಪರಿಪೂರ್ಣ ವಿಶ್ರಾಂತಿಯ” ಜೀವಿತವನ್ನು ಕರ್ತನು ನಮಗೆ ಕೊಡಲು ಬಯಸುತ್ತಾನೆ - ಅದು ಸತತವಾದ ಸಂತೋಷದ ಜೀವಿತವಾಗಿದ್ದು, ನಮ್ಮ ಸುತ್ತಲೂ ಏನೆ ಆಗುವುದರಿಂದಾಗಲಿ (ಅಥವಾ ಏನೇ ಆಗದಿರುವುದರಿಂದಾಗಲಿ), ಆ ಸಂತೋಷವು ಕದಡುವುದಿಲ್ಲ (ಇಬ್ರಿಯದವರಿಗೆ 4:9-11).
  • 10. “ಎಡಬಿಡದೆ ಪ್ರಾರ್ಥನೆ ಮಾಡಿರಿ” (1 ಥೆಸಲೋನಿಕದವರಿಗೆ 5:17), ಇದರ ಅರ್ಥವೇನೆಂದರೆ, ಎಲ್ಲಾ ಸಮಯಗಳಲ್ಲಿ ನಾವು ಉಸಿರಾಡುವ ರೀತಿಯಲ್ಲಿಯೇ ಪ್ರಾರ್ಥಿಸುವುದಾಗಿದೆ. ಇದರ ಅರ್ಥವೇನೆಂದರೆ, ಕೊಂಬೆಯು ಫಲವನ್ನು ನೀಡಲು ಎಲ್ಲಾ ಸಮಯಗಳಲ್ಲಿ ಅಸಹಾಯಕವಾಗಿ ಮರದ ಮೇಲೆ ಅವಲಂಬಿತವಾಗುವ ಹಾಗೇ, ನಾವು ಸತತವಾಗಿ ಅಸಹಾಯಕವಾದ ಮನೋಭಾವದಿಂದಿದ್ದು, ಎಲ್ಲದಕ್ಕೋಸ್ಕರ ದೇವರ ಮೇಲೆ ಅವಲಂಬಿತರಾಗಿರುವುದಾಗಿದೆ. ಯೋಹಾನ 15:5).