ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ನಾಯಕರಿಗೆ
WFTW Body: 

“ಅಧಿಕಾರಿಗಳು ಹಾಸ್ಯ ಮಾಡಿದರು, . . . . . ಸಿಪಾಯಿಗಳೂ ಆತನನ್ನು ಹಾಸ್ಯ ಮಾಡಿದರು, . . . . . ತೂಗಹಾಕಿದ್ದ ಆ ದುಷ್ಕರ್ಮಿಗಳಲ್ಲಿ ಒಬ್ಬನು ಆತನನ್ನು ದೂಷಿಸಿದನು,. . . . . ಎರಡನೆಯವನು ಅವನನ್ನು ಗದರಿಸಿ, ಈತನಾದರೋ ಅಲ್ಲದ್ದೇನೂ ಮಾಡಲಿಲ್ಲ” ಎಂದು ಹೇಳಿದನು. (ಲೂಕ 23:35-41). ಇಸ್ರಾಯೇಲ್‌ನ ಹಿರಿಯ ಬೈಬಲ್ ವಿದ್ವಾಂಸರುಗಳು ಮತ್ತು ಲೋಕ ವ್ಯವಹಾರದ ಜಾಣ್ಮೆಯುಳ್ಳವರು, ರೋಮ್‌ನ ವಿದ್ಯಾವಂತ ಸಿಪಾಯಿಗಳು ಯೇಸು ಯಾರೆಂದು ಸೂಕ್ಷ್ಮವಾಗಿ ಗ್ರಹಿಸಲಿಲ್ಲ, ಸತ್ಯವೇದದ ಬಗ್ಗೆ ಏನೂ ಗೊತ್ತಿಲ್ಲದ ಒಬ್ಬ ಕಳ್ಳನೂ ಮತ್ತು ಕೊಲೆಗಾರನಾದ ಒಬ್ಬ ದುಷ್ಕರ್ಮಿ, ತನ್ನ ಭೂಲೋಕದ ಕೊನೆ ಕ್ಷಣದಲ್ಲಿ ಯೇಸು ಯಾರೆಂದು ಗ್ರಹಿಸಬೇಕಾಯಿತು, ಯಾಕಿದು ಹೀಗೆ?

ವಿವೇಚನೆಯು - ಬುದ್ಧಿವಂತಿಕೆಯ, ಸತ್ಯವೇದ ಜ್ಞಾನದ ಅಥವಾ ಅನುಭವದ ಮೂಲಕ ಬರುವುದಿಲ್ಲ. ಯಾರು ಪ್ರಾಮಾಣಿಕವಾದ ಹೃದಯವನ್ನು ಹೊಂದಿರುತ್ತಾರೋ, ಅಂತಹವರಿಗೆ ದೇವರಿಂದ ಇದು ಕೊಡಲ್ಪಡುತ್ತದೆ. ನಾವು ಹೇಗೆ ವಿವೇಚನೆಯನ್ನು ಹೊಂದಬಹುದು ಎಂಬುದನ್ನು ಒಬ್ಬ ಕಳ್ಳನು ನಮಗೆ ಶಿಲುಬೆಯಲ್ಲಿ ಬೋಧಿಸುತ್ತಾನೆ. ಇಸ್ರಾಯೇಲ್‌ನ ಇಡೀ ಮಹಾಯಾಜಕರು, ಶಾಸ್ತ್ರಿಗಳು ಮತ್ತು ಸತ್ಯವೇದದ ವಿದ್ವಾಂಸರುಗಳು ಆ ದಿನ ಶಿಲುಬೆಯ ಕೆಳಗೆ ಯೇಸುವನ್ನು ಒಂದು ರೀತಿಯಲ್ಲಿ ಮತ್ತು ಬೇರೊಂದು ರೀತಿಯಲ್ಲಿ ಹಂಗಿಸುತ್ತಿದ್ದರು (ಮತ್ತಾಯ 27:41). ರಾಷ್ಟ್ರದ ಅನೇಕ ಮುಖ್ಯ ನಾಗರೀಕರುಗಳು, ಹಾದು ಹೋಗುವವರು, ಯೇಸುವನ್ನು ಕರುಣೆ ಇಲ್ಲದೇ ನಿಂದಿಸುತ್ತಿದ್ದರು ಮತ್ತು ದೇವಾಲಯವನ್ನು ಕೆಡವುವನೇ ಎಂದು ಹೇಳಿ ಆತನನ್ನು ಹಂಗಿಸುತ್ತಿದ್ದರು. (ಇದೊಂದು ತಪ್ಪು ಆಪಾದನೆಯಾಗಿದ್ದು, ಇಲ್ಲಿಯವರೆಗೆ ಯೇಸು ಎಂದಿಗೂ ಇಂತಹ ಹೇಳಿಕೆಯನ್ನು ಕೊಟ್ಟಿರಲಿಲ್ಲ) (ಮತ್ತಾಯ 27:39).

ಇಬ್ಬರು ಕಳ್ಳರೂ ಈ ಆಪಾದನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು, ಅವರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು. (ಮತ್ತಾಯ 27:44). ಆದರೆ ಇದ್ದಕ್ಕಿದ್ದಂತೆ, ಅವರಲ್ಲಿ ಒಬ್ಬನು ನಿಲ್ಲಿಸಿ, ಯೇಸುವಿನ ಬಗ್ಗೆ ಕಾಳಜಿಯನ್ನು ಹೊಂದಿ, “ಈತನಾದರೋ ಅಲ್ಲದ್ದೇನೂ ಮಾಡಲಿಲ್ಲವೆಂದು” (ಈ ಮನುಷ್ಯನು ಒಂದೇ ಒಂದು ಪಾಪವನ್ನು ಮಾಡಿಲ್ಲವೆಂದು) ಎಂದು ಹೇಳಿದನು. (ಲೂಕ 23:41). ಈತನಿಗೆ ಅದು ಹೇಗೆ ಗೊತ್ತು? ತಾನು ಪಡೆದುಕೊಳ್ಳಬೇಕಾಗಿದ್ದ ಮೆಸ್ಸಾಯನು ಯೇಸುವೆ ಎಂದು ಆತನು ಹೇಗೆ ಸೂಕ್ಷ್ಮವಾಗಿ ಗ್ರಹಿಸಿದನು? ಯೇಸುವಿಗೋಸ್ಕರ ಆ ಸಮಯಕ್ಕೆ ಯಾರು ಸಹ ಏನು ಮಾಡಲಾರದಂತ ಸಂದರ್ಭದಲ್ಲಿ, ಜನರ ಎಲ್ಲಾ ತಪ್ಪಾದ ಆಪಾದನೆಗಳನ್ನು ಆತನು ಹೇಗೆ ತಿರಸ್ಕರಿಸಿದನು? ಎಲ್ಲಾ ಆದ ಮೇಲೆ “ಬೆಂಕಿಯಿಲ್ಲದೇ ಹೊಗೆ ಬರಲು ಸಾಧ್ಯವೇ”, ಇಲ್ಲ? ಈ ಗಾದೆಯು ಲೋಕದ ಜ್ಞಾನದಿಂದ ಹೋಗುತ್ತಿರುವುದು. ಎಷ್ಟೇ ಸಣ್ಣದಾಗಿದ್ದರೂ, ಕಳ್ಳನು ಇದರಲ್ಲಿ ಸ್ವಲ್ಪ ಆಧಾರವಿದೆ ಎಂಬುದನ್ನು ಯೋಚಿಸಿರಬಹುದು, ನೂರಾರು ಜನರು ಯೇಸುವನ್ನು ಆಪಾಧಿಸುತ್ತಿದ್ದರೂ ಸಹ, ಯೇಸು “ಏನು” ತಪ್ಪು ಮಾಡಿಲ್ಲವೆಂದು ಕಳ್ಳನು ಹೇಳಿದನು!

ಹೇಗೆ ಕಳ್ಳನು “ಕಿವಿಗೆ ಬಿದ್ದಂತದ್ದನ್ನು” (ಯೆಶಾಯ 11:3) ತಿರಸ್ಕರಿಸುವ ರೀತಿಯಲ್ಲಿ ತುಂಬಾ ಆತ್ಮೀಕ ಮನಸ್ಸುಳ್ಳವನಾದನು? ಏಕೆಂದರೆ ಯೇಸು ಹೇಳುವುದನ್ನು ಆತನು ಕೇಳಿದನು, “ತಂದೆಯೇ, ಅವರಿಗೆ ಕ್ಷಮಿಸು, ತಾವು ಏನು ಮಾಡುತ್ತೇವೆಂಬುದನ್ನು ಅರಿಯರು ಅಂದನು”. (ಲೂಕ 23:24). ಒಂದು ಕಡೆಗೆ, ಕಳ್ಳನು ಅವಿಶ್ರಾಂತಿಯನ್ನು, ಕಳವಳ, ದ್ವೇಷವನ್ನು ಮತ್ತು ಆ ಸತ್ಯವೇದದ ಪಾಂಡಿತ್ಯರ ಅಸೂಯೆಯನ್ನು ನೋಡಿದನು. ಇನ್ನೊಂದು ಕಡೆ, ಕ್ಷಮಿಸುವಂತಹ ಆತ್ಮವನ್ನು, ಸ್ವಯಂ-ನೀತಿಕರಿಸಲ್ಪಡುವಿಕೆ ಇಲ್ಲದಿರುವುದನ್ನು ಮತ್ತು ಯೇಸುವಿನಲ್ಲಿರುವಂತಹ ವಿಶ್ರಾಂತಿಯನ್ನು ನೋಡಿದನು. ಆಗ ಯಾರು ಸರಿ ಮತ್ತು ಯಾರು ತಪ್ಪು ಎಂಬುದನ್ನು ವಿವೇಚಿಸಿಕೊಂಡನು.

ಸಭೆಯಲ್ಲಿಯೂ ಸಹ, ಹೀಗೆಯೇ ನಾವು ವಿವೇಚನೆಯನ್ನು ಉಪಯೋಗಿಸಬೇಕು. ಇಬ್ಬರು ಸಹೋದರರು ಅಥವಾ ಸಹೋದರಿಯರು ವಾಗ್ವಾದ ಮಾಡುವಾಗ, ಕಳ್ಳನ ಈ ಅಳತೆಗೋಲನ್ನು ನಾವು ಉಪಯೋಗಿಸಿದರೆ, ಯಾರು ಸರಿ ಮತ್ತು ಯಾರು ತಪ್ಪು ಎಂಬುದನ್ನು ನೀವು ಬೇಗನೆ ಪತ್ತೆ ಹಚ್ಚಲು ಸಾಧ್ಯ. “ದುಷ್ಠರಾದರೋ ಅಲ್ಲೋಲಕಲ್ಲೋಲವಾದ ಸಮುದ್ರದಂತಿದ್ದಾರೆ; ಅದು ಸುಮ್ಮನಿರದು, ಅದರ ತೆರೆಗಳು ಕೆಸರನ್ನೂ ಬುರುದೆಯನ್ನೂ ಕಾರುತ್ತಲಿರುತ್ತವೆ. ದುಷ್ಟರಿಗೆ ಸಮಾಧಾನವೇ ಇಲ್ಲವೆಂದು ನನ್ನ ದೇವರು ನುಡಿಯುತ್ತಾನೆ” (ಯೆಶಾಯ57:20,21). ದೇವರ ಕಣ್ಣಿನಲ್ಲಿ ತಪ್ಪಾಗಿರುವವರು ಸತತವಾಗಿ ಕಳವಳದಲ್ಲಿದ್ದು ಮತ್ತು ಅವಿಶ್ರಾಂತಿಯೆಂಬ ಜೀವಿತಕ್ಕೆ ವಿನಾಶವಾಗಿರುತ್ತಾರೆ. ಯಾವುದರಲ್ಲೆಂದರೆ, ಹೊಲಸಾದಾದ್ದನ್ನು ಮತ್ತು ಕೆಸರನ್ನು ದೈವಿಕ ಸಹೋದರ ಮತ್ತು ಸಹೋದರಿಯರ ವಿರುದ್ಧವಾಗಿ ತಮ್ಮ ಬಾಯಿಂದ ಚಿಮ್ಮುತ್ತಿರುತ್ತಾರೆ (ವದಂತಿ, ಆಪಾದನೆ, ದೂರುಗಳು ಮತ್ತು ಬೈಗುಳಗಳು) ನೀವು ಇಂತಹ ಸಹೋದರ ಮತ್ತು ಸಹೋದರಿಯನ್ನು ಭೇಟಿಯಾದಾಗ, ದೇವರು ಆತನನ್ನು ಮತ್ತು ಆಕೆಯನ್ನು ಯೆಶಾಯ 57:20,21 ರಲ್ಲಿ ಏನೆಂದು ಕರೆದಿರುವುದಕ್ಕಾಗಿಯೇ, ನೀವು ಹಿಂದು ಮುಂದು ನೋಡದೆ, ಆತನನ್ನು ಅಥವಾ ಆಕೆಯನ್ನು ಕೆಟ್ಟ ವ್ಯಕ್ತಿಯೆಂದು ವರ್ಗೀಕರಿಸಿ. ಇಲ್ಲಿ ಮುಂದಿರುವ ಸತ್ಯಾಂಶಕ್ಕಾಗಲಿ ಅಥವಾ ಪ್ರಕರಣದಲ್ಲಿ ಆಗಿರುವುದನ್ನಾಗಲಿ ಸಹ ನೋಡುವ ಅಗತ್ಯತೆ ಇಲ್ಲ. ಈ ವ್ಯಕ್ತಿಯಲ್ಲಿನ ಅವಿಶ್ರಾಂತಿ ಮತ್ತು ಕಳವಳವು ಎಲ್ಲದಕ್ಕೂ ಸಂಪೂರ್ಣವಾದ ಸಾಕ್ಷಿಯಾಗಿದೆ.

ಲೋಕದಲ್ಲಿನ ನ್ಯಾಯಾಲಯದ ಪ್ರಕರಣಗಳಲ್ಲಿ, ಕೆಲವೊಮ್ಮೆ ನ್ಯಾಯಾಧೀಶರು ಎಲ್ಲಾ ಸಾಕ್ಷಿಗಳ ಮುಖಾಂತರ ಬೇಡದ್ದನ್ನು ಪ್ರತ್ಯೆಕೀಸಲು ತುಂಬಾ ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ನ್ಯಾಯತೀರ್ಪಿಗೆ ಬರುವುದರೊಳಗೆ ಮತ್ತು ಆನಂತರವು ಸಹ ಅವರು ತಪ್ಪಿರಬಹುದು. ಸಭೆಯಲ್ಲಿನ ವಾಗ್ವಾದಕ್ಕಾಗಿ ಈ ರೀತಿಯ ವಿಧಾನವನ್ನು ನಾವು ಅಳವಡಿಸಿಕೊಂಡರೆ, ನಂತರ ಕೊನೆ ಹಂತಕ್ಕೆ ಬರುವುದರೊಳಗೆ ನಮ್ಮ ಜೀವಿತದ ಎಲ್ಲಾ ಸಮಯದಲ್ಲೂ ಒಂದು ಕಡೆಗೆ ಮತ್ತು ಬೇರೊಂದು ಕಡೆಗೆ ಕೇಳಿಸಿಕೊಳ್ಳುವುದರಲ್ಲಿ ಮಾತ್ರ ಕಳೆಯುತ್ತೇವೆ ಮತ್ತು ನಾವು ಇನ್ನೂ ತಪ್ಪಿನಲ್ಲಿರುತ್ತೇವೆ;

ಆದರೆ ದೇವರು ನಮಗೆ ಒಳ್ಳೆಯ ಹಾದಿಯನ್ನು ಕೊಟ್ಟಿದ್ದಾನೆ; ಯಾರು ವಿಶ್ರಾಂತಿಯಲ್ಲಿದ್ದಾರೆ ಮತ್ತು ಅವಿಶ್ರಾಂತಿಯಲ್ಲಿದ್ದಾರೆ ಎಂಬುದನ್ನು ತಪಾಸಣೆ ಮಾಡಿ. ತನ್ನನ್ನ ತಾನು ಯಾರು ನೀತಿಕರಿಸಲ್ಪಡುವುದನ್ನು ನಿರಾಕರಿಸುತ್ತಾರೆ ಮತ್ತು ಯಾರು ತುಂಬಾ ದೂರುಗಳನ್ನು ಉಳ್ಳವರಾಗಿದ್ದಾರೆ ಎಂಬುದನ್ನು ತಪಾಸಣೆ ಮಾಡಿ. ಯಾರು ನೀತಿವಂತನು ಮತ್ತು ಯಾರು ನೀತಿವಂತನಲ್ಲ ಎಂಬ ಉತ್ತರವನ್ನು ಕೂಡಲೇ ಹೊಂದುವಿರಿ.

ಶಿಲುಬೆಯಲ್ಲಿದ್ದಂತ ಕಳ್ಳನು ವಿವೇಚನೆಯ ರಹಸ್ಯವನ್ನು ನಮಗೆ ತೋರಿಸಿದ್ದಾನೆ.