2ಪೂರ್ವಕಾಲವೃತ್ತಾಂತ 20ನೇ ಅಧ್ಯಾಯದಲ್ಲಿ ಸೈತಾನನ ವಿರುದ್ಧ ನಾವು ಹೋರಾಡಬೇಕಾದ ಒಂದು ರೀತಿಯನ್ನು ನೋಡುತ್ತೇವೆ. ಯೆಹೋಷಾಫಾಟನಿಗೆ ವಿರೋಧವಾಗಿ ಬಂದ ಶತ್ರುಗಳ ಬಗ್ಗೆ ನಾವು ಇಲ್ಲಿ ಓದುತ್ತೇವೆ; ಮತ್ತು ಯೆಹೋಷಾಫಾಟನು ಶತ್ರುಗಳು ಆಕ್ರಮಿಸಿದಾಗ ಸರಿಯಾದದ್ದನ್ನೆ ಮಾಡುತ್ತಾನೆ. ಅದೇನೆಂದರೆ ಎಲ್ಲಾ ಯೆಹೂದ್ಯರನ್ನು ಕರೆದು ದೇವರಲ್ಲಿ ಉಪವಾಸ ಮತ್ತು ಪ್ರಾರ್ಥನೆಯಲ್ಲಿ ತೊಡಗಬೇಕೆಂದು ಪ್ರಕಟಿಸುತ್ತಾನೆ. ದೇವರ ಬಳಿ ಅವರ ನಿರ್ಬಲಾವಸ್ತೆಯನ್ನು, ಮೂರ್ಖತೆಯನ್ನು ಮತ್ತು ನಂಬಿಕೆಯನ್ನು ಅರಿಕೆ ಮಾಡುತ್ತಾನೆ. 12ನೇಯ ವಚನದಲ್ಲಿ ಈ ರೀತಿಯಾಗಿ ಪ್ರಾರ್ಥಿಸುತ್ತಾನೆ "ನಮ್ಮ ದೇವರೆ ಅವರನ್ನು ದಂಡಿಸದೆ ಬಿಡುವಿಯೊ? ನಮ್ಮ ಮೇಲೆ ಬಂದ ಈ ಮಹಾ ಸಮೂಹದ ಮುಂದೆ ನಿಲ್ಲುವದಕ್ಕೆ ನಮ್ಮಲ್ಲಿ ಬಲವಿಲ್ಲ, ಏನು ಮಾಡಬೇಕೆಂದೂ ತಿಳಿಯದೂ; ನಮ್ಮ ಕಣ್ಣುಗಳು ನಿನ್ನನ್ನೆ ನೋಡುತ್ತವೆ". ಇದು ಎಲ್ಲಾ ಬಲವಾದ ಪ್ರಾರ್ಥನೆಗಳ ಮುಖ್ಯ ರಹಸ್ಯವಾಗಿದೆ. ನಮ್ಮ ನಿರ್ಬಲಾವಸ್ತೆಯನ್ನು, ಮೂರ್ಖತೆಯನ್ನು ಗುರುತಿಸಿ ಕೇವಲ ದೇವರ ಮೇಲೆ ಭಾರಹಾಕಿ ನಮ್ಮ ಸಲುವಾಗಿ ದೇವರೇ ಯುದ್ಧ ಮಾಡಲಿಕ್ಕೆ ಅವಕಾಶಕೊಡುವಂಥದ್ದು.
ಯೆಹೋಷಾಫಾಟನು ನನಗೆ ಏನೂ ತಿಳಿಯದು ದೇವರೆ ಎಂಬುದಾಗಿ ಒಳ್ಳೆಯ ಅರಿಕೆಯನ್ನು ಮಾಡುತ್ತಾನೆ. ಹಾಗು ಈ ರೀತಿಯ ಅರಿಕೆ ಒಳ್ಳೆಯ ಅರಿಕೆಯಾಗಿದೆ. ಏಕೆಂದರೆ ದೇವರ ವಾಗ್ದಾನ ಹೇಳುತ್ತದೆ, ‘ನಿಮ್ಮಲ್ಲಿ ಜ್ಞಾನವು ಕಡಿಮೆಯಾಗಿದ್ದರೆ ಬೇಡಿಕೊಳ್ಳಿರಿ ಅದನ್ನು ನಾನು ಹಂಗಿಸದೇ ದಯಪಾಲಿಸುವೆ’ ಎಂದು. ಆದರೆ ನಾವು ದೇವರಲ್ಲಿ ಜ್ಞಾನವನ್ನು ಬೇಡುವಾಗ ನಂಬಿಕೆಯಿಂದ ಬೇಡಬೇಕು ಇದನ್ನು ಯಾಕೋಬನ ಪತ್ರಿಕೆಯಲ್ಲಿ 1:5,6 ರಲ್ಲಿ ಓದುತ್ತೇವೆ. ಹಾಗು ಇದನ್ನೆ ಯೆಹೊಷಾಫಾಟನು ಮಾಡಿದನು. ಆತನು ತನ್ನ ನಿರ್ಬಲಾವಸ್ತೆಯನ್ನು ಮತ್ತು ಜ್ಞಾನದ ಕೊರತೆಯನ್ನು ಮಾತ್ರ ಅರಿಕೆ ಮಾಡದೇ ತನ್ನ ಸಂಪೂರ್ಣ ನಂಬಿಕೆ ದೇವರ ಮೇಲೆಯೆ ಇದೆ ಎಂಬುದನ್ನು ಪ್ರಕಟಿಸಿದನು. ಆತನು ಹೇಳಿದ್ದೆನೆಂದರೆ "ನಮ್ಮ ಕಣ್ಣುಗಳು ನಿನ್ನನ್ನೆ ನೋಡುತ್ತವೆ", ಇನ್ನೊಂದು ರೀತಿಯಲ್ಲಿ ನಾವು ನೋಡುವುದಾದರೆ ಆತನು ದೇವರಿಗೆ ತನ್ನ ಪರವಾಗಿ ಯುದ್ಧ ಮಾಡು ಎಂದು ಪ್ರಾರ್ಥಿಸಿದನು ಮತ್ತು ದೇವರು, ಪ್ರಾರ್ಥನೆಗೆ ತಕ್ಕಂತೆ ಮಾಡಿದನು. ಯೆಹೊಷಾಫಾಟನು ಪ್ರಾರ್ಥನೆ ಮಾಡಿದ ತಕ್ಷಣವೇ ದೇವರ ಉತ್ತರ ೧೫,೧೭ರ ವಚನದಲ್ಲಿ ಈ ರೀತಿಯಾಗಿ ಬಂದಿತು "ಕಳವಳ ಗೊಳ್ಳಬೇಡಿರಿ, ಹೆದರ ಬೇಡಿರಿ, ಯುದ್ಧವು ನಿಮ್ಮದಲ್ಲ ದೇವರದೇ. ನೀವು ಯುದ್ಧಮಾಡುವದು ಅವಶ್ಯವಿಲ್ಲ ಯಹೂದ್ಯರೆ, ಯೆರೂಸಲೇಮಿನವರೇ ಸುಮ್ಮನೆ ನಿಂತುಕೊಂಡು ಯೆಹೋವನು ನಿಮಗೊಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ". ಯೆಹೊಷಾಫಾಟನು ದೇವರು ಹೇಳಿರುವ ಮಾತು ಕೇಳಿ ತಕ್ಷಣವೇ ದೇವರನ್ನು ಸ್ತುತಿಸಿದನು. ಮರು ದಿನ ಯೆಹೊಷಾಫಾಟನು ದೇವರಿಗೊಸ್ಕರ ಶುದ್ಧತ್ವವೆಂಬ ವಸ್ತ್ರದಲ್ಲಿ ಗಾಯನ ಮಾಡಿದ ಕೆಲವರನ್ನು ಯಹೂದ್ಯ ಸೈನ್ಯದ ಮುಂದೆ ಹೋಗಲು ಸಿದ್ಧ ಮಾಡಿದನು. ಅವರು ಉತ್ಸಾಹದಿಂದ ಕೃತಜ್ಞಾ ಸ್ತುತಿಗಳನ್ನು ಪ್ರಾರಂಭಿಸಿದ ಕೂಡಲೆ ದೇವರು ಅವರ ವಿರೋಧಿಗಳನ್ನು ಸೋಲಿಸಿದನು (ವಚನ 21,22).
ನಮ್ಮ ಪ್ರೋತ್ಸಾಹದ ಸ್ತುತಿಸ್ತೋತ್ರದ ನಂಬಿಕೆಯನ್ನು ವ್ಯಕ್ತ ಪಡಿಸುವಾಗ ವೈರಿಗಳು ಮುರಿದು ಬಿಳುತ್ತಾರೆ. ನಾವು ಇಲ್ಲಿ ನೋಡುವಾಗ ಅವರು ಪರಿಶುದ್ಧ ಉಡುಪುಗಳನ್ನು ಹಾಕಿಕೊಂಡು ದೇವರನ್ನು ಸ್ತುತಿಸಿದರು. ಈ ರೀತಿಯಾದ ಪವಿತ್ರತೆ ಮತ್ತು ಸ್ತುತಿಗಳ ನಡುವೆ ಇರುವ ಸಮತೋಲನವನ್ನು ನಮ್ಮ ಸಭೆಗಳಲ್ಲಿ ಹೊಂದಿರಬೇಕು. ಆದರೆ ಈಗಿನ ಕ್ರಿಸ್ತೀಯ ಜೀವಿತದಲ್ಲಿ ಅನೇಕರು ಈ ಸಮತೋಲನ ಇಲ್ಲದೆ ಯಾವುದೊ ಒಂದು ತುದಿಯಲ್ಲಿರುತ್ತಾರೆ. ಒಂದು ತುದಿ ನೋಡುವದಾದರೆ ಕೆಲವರು ಪವಿತ್ರತೆಯಿಲ್ಲದೆ ಗಟ್ಟಿಯಾಗಿ ಸ್ತುತಿಸ್ತೋತ್ರಗಳನ್ನು ಭಾವನಾತ್ಮಕವಾಗಿ ಹೇಳುತ್ತಾರೆ. ಅನ್ಯಭಾಷೆಯಿಂದ ಸಭೆಯಲ್ಲಿ ಮಾತಾಡಿ, ಮನೆಯಲ್ಲಿ ಹೆಂಡತಿಯ ಮೇಲೆ ಮಾತೃಭಾಷೆಯಲ್ಲಿ ಕೂಗಾಡುತ್ತಾರೆ. ಇದು ಒಂದು ರೀತಿಯಾದ ಕಪಟತನ. ಈ ರೀತಿಯಾದ ಭಾವನಾತ್ಮಕ ಮನುಷ್ಯನಿಗೆ ಯಾವುದೇ ವಿವೇಚನೆಯು ಇಲ್ಲದ ಕಾರಣ ಅತೀ ಶಬ್ದದ ಸ್ತೋತ್ರಗಳು ಮಹತ್ವದ್ದಾಗಿ ತೋರುತ್ತದೆ. ಒಬ್ಬರು ಎಷ್ಟೆ ಜೋರಾಗಿ ಅನ್ಯ ಭಾಷೆಯಲ್ಲಿ ಹಾಡಿದರೂ ಶರೀರಭಾವದಲ್ಲಿ ಇದ್ದವರು ದೇವರನ್ನು ಎಂದಿಗೂ ಮೆಚ್ಚಿಸಲು ಸಾಧ್ಯವಿಲ್ಲ ಎಂಬುವದು (ರೋಮ 8:8) ರಲ್ಲಿ ಓದುತ್ತೇವೆ. ಇನ್ನೊಂದು ತುದಿಯಲ್ಲಿ ಕೆಲವು ವಿಶ್ವಾಸಿಗಳು ತಮ್ಮನ್ನು ತಾವು ಪರೀಕ್ಷಿಸಿ, ದೈವಿಕ ಜೀವನ ಮಾಡುತ್ತಾ ಇರುತ್ತಾರೆ ಆದರೆ ಅವರಲ್ಲಿ ಉತ್ಸಾಹದಿಂದ, ಉಲ್ಲಾಸದಿಂದ ಸ್ತುತಿಸುವ ಆತ್ಮವೇ ಇರುವದಿಲ್ಲ. ಇವರು ಕೇವಲ ಮತ್ತೊಬ್ಬರನ್ನು ಬಲಪಡಿಸುತ್ತ ಬಹಳ ಗಂಭಿರತನದ ಜೀವನ ಸಾಗಿಸುತ್ತಾರೆ.
(ಇಬ್ರಿಯ 2:12) ರಲ್ಲಿ ಹೇಳುವ ಪ್ರಕಾರ ಯೇಸುಕ್ರಿಸ್ತನು 2 ಸಂಗತಿಗಳನ್ನು ಸಭೆಯ ಮಧ್ಯದಲ್ಲಿ ಮಾಡುತ್ತಾನೆ. (1)ತಂದೆಯ ನಾಮವನ್ನು ಪ್ರಕಟಿಸುವದು (2)ಸಭಾ ಮಧ್ಯದಲ್ಲಿ ಸ್ತುತಿ ಪದಗಳನ್ನು ಹಾಡುವದು. ಯೇಸುಕ್ರಿಸ್ತನು ತಂದೆಯ ವಾಕ್ಯವನ್ನು ನಮಗೆ ತರುವ ದೂತನಷ್ಟೆ ಆಗಿರದೆ ಸಭೆಯಲ್ಲಿ ಸಂಗೀತವನ್ನು ಹಾಡುವ ನಾಯಕನಾಗಿದ್ದಾನೆ. ಇವೆರಡು ಕ್ಷೇತ್ರದಲ್ಲಿ ನಾವು ಯೇಸುವನ್ನು ನಮ್ಮ ಹಿರಿಯ ಸಹೋದರನಾಗಿ ಮತ್ತು ಮಾರ್ಗದರ್ಶಿಯಾಗಿ ಹಿಂಬಾಲಿಸ ಬೇಕು.
ಸಭೆಯಲ್ಲಿ ದೇವರ ವಾಕ್ಯವನ್ನು ಹಂಚುವಾಗ ತಂದೆಯಾದ ದೇವರನ್ನು ಪ್ರಕಟಪಡಿಸಬೇಕೆ ವಿನಹ ಸ್ವಂತದ್ದನ್ನಲ್ಲ. ಅಲ್ಲಿ ನಿಂತುಕೊಂಡು ನಮ್ಮ ಪ್ರಸಂಗಮಾಡುವ ಕಲೆಯನ್ನು ಅಥವಾ ಕಳೆದವಾರದಲ್ಲಿ ಯಾವ ರೀತಿಯಾಗಿ ನಾನು ನಂಬಿಗಸ್ತನಾಗಿದ್ದೆನು ಎಂಬುವದನ್ನು ತಿಳಿಸಬಾರದು ಮತ್ತು ಜನರ ತಲೆಯ ಮೇಲೆ ದೇವರ ವಾಕ್ಯವನ್ನು ಟೀಕೆಯಾಗಿ ಉಪಯೋಗಿಸಬಾರದು. ಇಂಥದೆಲ್ಲ ಲೌಖಿಕವಾದದ್ದು, ಭಾವಾತ್ಮಕವಾದದ್ದು ಮತ್ತು ಪೈಶಾಚಿಕವಾದದ್ದಾಗಿದೆ. ಇದು ಯೇಸುವಿನ ಹೆಸರಿಗೆ ಅಪಮಾನ ತರುವದಾಗಿದೆ. ನಾವು ಪ್ರಕಟನೆ 19:10 ರಲ್ಲಿ ಓದುವ ಪ್ರಕಾರ, ಕೇವಲ ಯೇಸುವಿನ ವಿಷಯವಾದ ಸಾಕ್ಷಿಯು ಪ್ರವಾದನೆಯ ಆತ್ಮವಾಗಿದೆ. ನಾವೂ ಕೂಡ ಯೇಸುಕ್ರಿಸ್ತನ ಜೊತೆಗೂಡಿ ಸಭೆಯಲ್ಲಿ ತಂದೆಯ ನಾಮವನ್ನು ಕೀರ್ತಿಸಬೇಕು. ಪ್ರಾರ್ಥನೆ ಮಾಡುವದು ಅಷ್ಟೆ ಸಾಲದು, ಆತನನ್ನು ಸ್ತುತಿಸಲೂಬೇಕು. ಹತ್ತು ಕುಷ್ಟರೋಗಿಗಳು ಗುಣ ಹೊಂದಲಿಕ್ಕೆ ಪ್ರಾರ್ಥಿಸಿದರು ಆದರೆ ಅದರಲ್ಲಿ ಕೇವಲ ಒಬ್ಬನೆ ಹಿಂತಿರುಗಿ ಸ್ತೋತ್ರ ಸಲ್ಲಿಸಿದನು, ಈಗಲೂ ಕೂಡ ದುರದೃಷ್ಟವಾಗಿ ಹೆಚ್ಚಿನ ಭಾಗ ಜನರು ಹಿಂತಿರುಗಿ ಸ್ತುತಿಸ್ತೋತ್ರ ಸಲ್ಲಿಸುವದಿಲ್ಲ.
24ನೇ ವಚನದಲ್ಲಿ ಯೆಹೊಷಾಫಾಟನ ಯುದ್ಧಕ್ಕೆ ಹೋಗುವ ದೃಷ್ಟಿಕೋನ ನೋಡುವಾಗ ಒಬ್ಬ ವೈರಿಯಾದರೂ ಆತನ ಮುಂದೆ ನಿಲ್ಲಲಿಲ್ಲ. ಅದೇ ರೀತಿಯಾಗಿ ನಾವೂ ಕೂಡ ನಮ್ಮ ವೈರಿಯಾದ ಸೈತಾನನ ವಿರುದ್ಧ ಹೋರಾಡಲು ಬರುವಾಗ ಸ್ತುತಿಗಳನ್ನು ಮತ್ತು ನಂಬಿಕೆಯನ್ನು ಹೊಂದಿರುವಾಗ ನಮ್ಮ ಎದುರಾಗಿ ಒಂದೂ ಸಮಸ್ಯೆಗಳು ನಿಲ್ಲಲಾರದು. 2ನೇ ಪೂರ್ವಕಾಲವೃತ್ತಾಂತ 20ನೇ ಅಧ್ಯಾಯದ ಪ್ರಾರಂಭದಲ್ಲಿ ದೊಡ್ಡ ಸೈನ್ಯವನ್ನು(ಸಮಸ್ಯೆಗಳನ್ನು) ನೋಡುತ್ತೇವೆ ಆದರೆ ಕೊನೆಯಲ್ಲಿ ಒಬ್ಬ ವೈರಿ(ಸಮಸ್ಯೆ) ಕೂಡ ನಿಂತಿರುವದಿಲ್ಲ. ದೇವರು ನಮ್ಮ ಜೀವನದಲ್ಲಿರುವ ಯಾವುದೇ ಸಮಸ್ಯೆಯನ್ನು ನಿವಾರಿಸಲು ಶಕ್ತನು. 25ನೇಯ ವಚನದಲ್ಲಿ ನೋಡುತ್ತೇವೆ ಯಹೂದ್ಯರು ಯುದ್ಧದನಂತರ ಉಳಿದ ಸಂಪತ್ತನ್ನು ಹೊಂದಿಕೊಂಡು ಸಮೃದ್ಧರಾದರು. ಇದೇ ರೀತಿ ಆತ್ಮಿಕವಾದ ಲಾಭ ಮತ್ತು ಸಂಪತ್ತನ್ನು ಪಡೆಯಬಹುದು.
ಆದರೆ ದುರಂತವೆಂದರೆ, ಯೆಹೊಷಾಫಾಟನು ಕಲಿತಿರುವ ಆತ್ಮಿಕ ಪಾಠವನ್ನು ಮರೆತು ಕೊನೆಯದಾಗಿ ತನ್ನ ಸ್ವಂತ ವಿಚಾರಗಳಿಗೆ ಒಪ್ಪಂದ ಮಾಡಿಕೊಂಡು ಬಿದ್ದು ಹೋದನು. ಅನೇಕರು ಈ ರೀತಿಯಾಗಿ ಕರ್ತನನ್ನು ಪರಿಶುದ್ಧತ್ವದಲ್ಲಿ ಸ್ತುತಿಸುವದನ್ನು ಕಲಿತು ಅದನ್ನು ಅಷ್ಟೆ ಉತ್ಸಾಹದಿಂದ ಮುಂದುವರಿಸಲಾಗದೇ ಬಿದ್ದುಹೊಗುತ್ತಾರೆ. ಆದರೆ ಇದು ನಮಗೆ ಆಗಕೂಡದು. ದೇವರು ಕೊನೆಯ ತನಕ ನಮ್ಮನ್ನು ಮುಂದೆ ನಡೆಸಲು ಶಕ್ತನಾಗಿದ್ದಾನೆ. ದೇವರಿಗೆ ನಾವು ಯಾವಾಗಲೂ ಸ್ತೋತ್ರ ಸಲ್ಲಿಸುತ್ತೆವೆ ಏಕಂದರೆ ಯಾವುದೊ ದೊಡ್ಡ ಅವಘಡ ತಪ್ಪಿತು ಎಂಬುದಕ್ಕಲ್ಲ (ಮನೋವಿಜ್ಞಾನಿಗಳು ಹೇಳುವ ಪ್ರಕಾರ), ಬದಲಾಗಿ ಆಗಿರುವ ಸ್ಥಿತಿ ಅನುಸಾರವಾಗಿ ಇದಕ್ಕಿಂತ ಒಳ್ಳೆಯದಾಗಲಿಕ್ಕೆ ಸಾಧ್ಯವಿಲ್ಲ ಎನ್ನುವದಕ್ಕೊಸ್ಕರ. ಏಕೆಂದರೆ ದೇವರು ರೋಮ. 8:28 ರಲ್ಲಿ ಎಲ್ಲದನ್ನು ನಮ್ಮ ಒಳ್ಳೆಯದಕ್ಕೋಸ್ಕಕರವೇ ಮಾಡುತ್ತಾನೆ, ಎಂದು. ಇದು ನಂಬಿಕೆಯಿಂದ ತುಂಬಿರುವ ಕೃತಜ್ಞತಾಸ್ತುತಿ. ನಾವು ಹಿಂತಿರುಗಿ ಸ್ವಲ್ಪ ನೋಡುವದಾದರೆ ಅನೇಕ ಸಂಗತಿಗಳು ನಮಗೆ ಹಾನಿ ಮಾಡುತ್ತವೆಯೆಂದು ನಾವು ಅಂದುಕೊಂಡಿದ್ದೆವು, ಆದರೆ ದೇವರು ಅದ್ಭುತವಾಗಿ ನಮ್ಮನ್ನು ನಡಿಸಿರುವದನ್ನು ಗ್ರಹಿಸುತ್ತೇವೆ. ದೇವರು ಇದೇ ರೀತಿ ಮುಂದೆಯೂ ಮಾಡುತ್ತಾನೆ. ಇದನ್ನು ನಾವು ನಂಬುವದೇ ಆದರೆ, ದೇವರನ್ನು ನಾವು ಯಾವಾಗಲೂ ಸ್ತುತಿಸುತ್ತೇವೆ.
ನಾವು 106:12 ನೇ ಕೀರ್ತನೆಯಲ್ಲಿ ಓದುತ್ತೇವೆ "ಅವರು ಆತನ ಮಾತು ನಂಬಿ ಆತನನ್ನು ಕೀರ್ತಿಸಿದರು". 11ನೇ ವಚನದಲ್ಲಿ ಇಸ್ರಾಯೆಲ್ಯರು ತಮ್ಮ ವಿರುದ್ಧ ಬಂದ ವಿರೋಧಿಗಳ ಜಲಸಮಾಧಿ ಆಗಿರುವದನ್ನು ನೋಡಿದ ಮೇಲೆ ದೇವರನ್ನು ಕೊಂಡಾಡಿದರು. ಎಲ್ಲಾ ಸಮಸ್ಯೆಗಳು ಮುಗಿದ ಮೇಲೆ ಕ್ರಿಸ್ತನನ್ನು ಸ್ತುತಿಸುವುದು, ಇದು ಕಣ್ಣಿನಿಂದ(ನೋಡಿ) ಬದುಕುವ ಜೀವನ ಆಗಿದೆ. ಇವೆಲ್ಲವು ಹಳೆಯ ಒಡಂಬಡಿಕೆಯಲ್ಲಿ ಆಗಿರುವುಗಳು ಏಕೆಂದರೆ ಅಲ್ಲಿ ನಂಬಿಕೆಯಿಂದ ಜೀವಿಸುವದು ಸಾಧ್ಯವಿಲ್ಲದಾಗಿತ್ತು.
ಆದರೆ ನಾವು ಹೊಸ ಒಡಂಬಡಿಕೆಯಲ್ಲಿ ಇರುವಾಗ, ನಮ್ಮ ತಲೆಗಳು ಪವಿತ್ರಾತ್ಮ ತೈಲದಿಂದ ಅಭಿಷೇಕ ಹೊಂದಿದ್ದರಿಂದ ದೇವರಿಗೆ ನಾವು ಯಾವಾಗಲೂ ವೈರಿಗಳ ಸಮ್ಮುಖದಲ್ಲಿಯೂ ಸ್ತುತಿಸುತ್ತೇವೆ. ದೇವರು ನಮ್ಮ ಕುರುಬನು ನಾವು ಕೊರತೆ ಪಡುವದಿಲ್ಲ ಆತನು ನಮ್ಮನ್ನು ಹಸರುಗಾವಲು ಗಳ ಬಳಿ ತಂಗಿಸುತ್ತಾನೆ (ಕೀರ್ತನೆ 23:5,1,2). ನಾವು ದೇವರಿಗೆ ಯಾವಾಗಲೂ ಸ್ತೋತ್ರ ಹೇಳಬೇಕು, ಕೆಂಪು ಸಮುದ್ರ ನಮ್ಮ ಮುಂದೆ ತೆರೆಯದಿದ್ದರೂ, ಐಗುಪ್ತದವರು ನಮ್ಮ ಮೇಲೆ ತಮ್ಮ ಕ್ರೋಧವನ್ನು ಇಟ್ಟಿದ್ದರೂ, ಮತ್ತು ಪರ್ವತಗಳು ನಮ್ಮನ್ನು ಎಲ್ಲಾ ಕಡೆಯಿಂದ ಆವರಿಸಿ ತಡೆಮಾಡಿದರೂ ದೇವರಿಗೆ ಸ್ತೋತ್ರ. ಈ ರೀತಿಯಾದ ನಂಬಿಕೆ ದೇವರಲ್ಲಿ ನಿಜವಾದ ನಂಬಿಕೆಯಾಗಿ ಉಕ್ಕುತ್ತದೆ.
ಮರಣದ ಕಣಿವೆಯಲ್ಲಿ ಇದ್ದರೂ, ಕೆಡುಕಿನ ಭಯ ನಮಗಿರದು. ಏಕೆಂದರೆ ವೈರಿ ನಮ್ಮ ತಲೆಕೂದಲನ್ನೂ ಕೂಡ ಮುಟ್ಟುವದಕ್ಕಿಂತ ಮುಂಚಿತವಾಗಿ ನಮ್ಮ ತಂದೆಯಾದ ದೇವರ ಅನುಮತಿಯನ್ನು ಪಡೆಯಬೇಕು ಯೋಹಾನ 19:11 ರಲ್ಲಿ ಓದುವ ಪ್ರಕಾರ ನಾವು ಕೂಡ ಕ್ರಿಸ್ತೇಸುವಿನ ಹಾಗೆ "ನನ್ನ ಮೇಲೆ ನಿನಗೆ ಯಾವುದೇ ಅಧಿಕಾರವಿಲ್ಲ ಅದು ನನ್ನ ತಂದೆಯಿಂದ ಬರದೇ ಹೊಗಿದ್ದರೆ". ಆದ್ದರಿಂದ ನಾವು ನಮ್ಮ ಬಗ್ಗೆ ಅನುಕಂಪವಾಗಲಿ, ದೂರು ಹೇಳುವದಾಗಲಿ ಅಥವಾ ಇನ್ನೊಬ್ಬರ ಬಗ್ಗೆ ಗುಣಗುಟ್ಟುವದಾಗಲಿ ಮಾಡುವ ಯಾವದೇ ಕಾರಣವಿರುವದಿಲ್ಲ.