WFTW Body: 

ಮತ್ತಾಯ 4:1-11 ರಲ್ಲಿ ಯೇಸುವಿಗೆ ಬಂದ ಶೋಧನೆಗಳ ಬಗ್ಗೆ ಒದುತ್ತೇವೆ. ಸತ್ಯವೇದ ಇಬ್ರಿಯ 4:15 ರಲ್ಲಿ ಹೀಗೆ ಹೇಳಲಾಗಿದೆ. "ಯೇಸು ನಮ್ಮ ಹಾಗೆಯೇ ಶೋಧನೆಗೆ ಗುರಿಯಾದನು. ಆದರೆ ಪಾಪ ಮಾತ್ರ ಮಾಡಲಿಲ್ಲ" ಕೆಲವು ಬುದ್ಧಿವಂತ ಕ್ರಿಸ್ತವಿಶ್ವಾಸಿಗಳು ಈ ವಾಕ್ಯವನ್ನು ವಿಮರ್ಶಿಸಿ/ವಿಶ್ಲೇಶಿಸಿ ಕೇಳುವ ಪ್ರಶ್ನೆಗಳೇನೆಂದರೆ, "ಯೇಸು ಪಾಪ ಮಾಡಿದ್ದನೆ? ಅಥವಾ "ಆತನಿಗೆ ಪಾಪ ಮಾಡಲು ಸಾಧ್ಯವಾಗುತ್ತಿರಲಿಲ್ಲವೇನೋ?" ಎಂಬುದಾಗಿ. ಇನ್ನು ಕೆಲವರು ಹೇಳುವುದೇನೆಂದರೆ "ಆತನು ಪಾಪ ಮಾಡಲು ಅಶಕ್ತನಾಗಿದ್ದನು" ಮತ್ತೂ ಕೆಲವರು ಹೇಳುವುದೇನೆಂದರೆ, "ಆತನಿಗೆ ಪಾಪ ಮಾಡದೇ ಇರಲು ಸಾಧ್ಯವಿತ್ತು"

ಆದರೆ ನಾವು ಇಂತಹ ತರ್ಕ(ವಿಚಾರ)ದಲ್ಲಿ ತೊಡಗಬಾರದು. ಸಾಮಾನ್ಯ ಮನುಷ್ಯನ ಮಾನಸಿಕ ಸ್ಥಿತಿಯನ್ನು ನಾವು ತಿಳಿದುಕೊಳ್ಳುವದು ಕಷ್ಟಕರ. ಹಾಗಿರುವಾಗ ಯೇಸುವಿನ ಮನಸ್ಥಿತಿಯನ್ನು ನಾವು ತಿಳಿದುಕೊಳ್ಳುವುದಾದರೂ ಹೇಗೆ? ನಮ್ಮ ಹಾಗೆ ಆತನು ಶೋಧನೆಗೆ ಗುರಿಯಾದನು ಮತ್ತು ಪಾಪ ಮಾತ್ರ ಮಾಡಲಿಲ್ಲವೆಂಬುದಾಗಿ ತಿಳಿದುಕೊಳ್ಳುವದು ಅಷ್ಟೆ ಸಾಕು. ಈ ವಿಷಯದಲ್ಲಿ ಯೇಸುವೇ ನಮಗೆ ಮಾದರಿಯಾಗಿದ್ದಾನೆ.

ಆತನು ದೇವರಾಗಿದ್ದನು ಎಂಬುದನ್ನು ನಾವು ಬಲ್ಲೆವು ಮತ್ತು ಭೂಮಿಯ ಮೇಲೆ ಮನುಷ್ಯನಾಗಿ ಅವತರಿಸಿದಾಗ ಆತನು ತನ್ನ ದೈವಿಕ ಶಕ್ತಿಯನ್ನು ಉಪಯೋಗಿಸಲಿಲ್ಲ ಎಂಬುದನ್ನೂ ನಾವು ಬಲ್ಲೆವು. ದೇವರನ್ನು ಶೋಧಿಸಲಾಗುವದಿಲ್ಲ. ಆದರೆ ಯೇಸು ಸರ್ವ ವಿಷಯದಲ್ಲಿ ಶೋಧಿಸಲ್ಪಟ್ಟನು. ಸತ್ಯವೇದ ತಿಳಿಸುವ ಪ್ರಕಾರ ಯೇಸು ಎಲ್ಲಾ ವಿಷಯದಲ್ಲಿ ಶೋಧನೆಗೆ ಗುರಿಯಾದನು. ಆದರೆ ಆತನು ಪಾಪ ಮಾತ್ರ ಮಾಡಲಿಲ್ಲ ಎಂಬುದನ್ನು ನಾನು ನಂಬುತ್ತೇನೆ. ಯೇಸು ಜಯಿಸಿದ ಪ್ರಕಾರ ನಾನೂ ಕೂಡ ಜಯಿಸಬಹುದೆಂಬ ಈ ಸತ್ಯ ನನ್ನ ನಂಬಿಕೆಯನ್ನು ಹೆಚ್ಚಿಸುತ್ತದೆ (ಪ್ರಕಟಣೆ 3:21). ಯೇಸು 40 ದಿನಗಳ ತನಕ ಸೈತಾನನಿಂದ ಶೋಧಿತನಾದನು (ಲೂಕ 4:2). ಇಲ್ಲಿ ನಾವು ಮೂರು ಶೋಧನೆಗಳ ಬಗ್ಗೆ ಮಾತ್ರ ನೋಡುತ್ತೇವೆ. ಜೊತೆಗೆ, ಯೇಸುವು ಪ್ರತಿಯೊಂದು ಶೋಧನೆಯನ್ನು ದೇವರಾತ್ಮವೆಂಬ ಕತ್ತಿಯಿಂದ ಅಂದರೆ, "ಇದೂ ಕೂಡ ಬರೆದಿದೆ" ಎಂದು ಹೇಳುತ್ತಾ ಜಯಿಸಿದನು ಎಂಬುದನ್ನೂ ನಾವು ಕಾಣುತ್ತೇವೆ.

ಯೇಸುವು ದೇವರ ವಾಕ್ಯವನ್ನು ಉಲ್ಲೇಖಿಸುವುದನ್ನು ನೋಡಿ, ಸೈತಾನನು ತಾನೂ ದೇವರ ವಾಕ್ಯವನ್ನು ಈ ರೀತಿಯಾಗಿ ಉಲ್ಲೇಖಿಸಿದನು. "ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು" ಎಂದು ಬರೆದಿದೆಯಲ್ಲಾ. ಆದ್ದರಿಂದ ನೀನು ಕೆಳಗೆ ಧುಮುಕು (ಬೀಳು) (ಮತ್ತಾಯ 4:6). ಅದಕ್ಕೆ ಯೇಸುವು "ನಿನ್ನ ದೇವರಾದ ಕರ್ತನನ್ನು ಪರೀಕ್ಷಿಸಬಾರದು" ಎಂಬುದಾಗಿ ಸಹ ಬರೆದಿದೆ (ಮತ್ತಾಯ 4:7) ಅಂದನು. ಸಂಪೂರ್ಣ ಸತ್ಯವೆಂಬುದು ಕೇವಲ ದೇವರ ಒಂದೇ ವಾಕ್ಯದಲ್ಲಿ ಒಳಗೊಂಡಿಲ್ಲ. ಅದು ದೇವರ ಪರಿಪೂರ್ಣ ವಾಕ್ಯದಲ್ಲಿ ಅಡಗಿದೆ. ಹೇಗೆಂದರೆ, ಒಂದು ವಾಕ್ಯವು ಇನ್ನೊಂದು ವಾಕ್ಯವನ್ನು ಸಮತೋಲನದಲ್ಲಿಡುತ್ತದೆ. ದೇವರ ವಾಕ್ಯದ ಮುಖಾಂತರ ಯೇಸುವನ್ನು ಪಾಪಕ್ಕೆ ತಳ್ಳಲು ಸೈತಾನನು ಪ್ರಯತ್ನಿಸಿರುವಾಗ, ನಿಮ್ಮನ್ನು ತಪ್ಪು ದಾರಿಗೆಳೆಯಲು ಆತನು ದೇವರ ವಾಕ್ಯದ ಸಹಾಯ ತೆಗೆದುಕೊಳ್ಳುವದರಲ್ಲಿ ಅಶ್ಚರ್ಯವಿಲ್ಲ. ನಿಮಗೆ ದೇವರ ವಾಕ್ಯದ ತಿಳುವಳಿಕೆಯಿಲ್ಲದಿದ್ದರೆ ನೀವು ನಾಶ ಹೊಂದುತ್ತೀರಿ. ಯೇಸುವಿನ ವಿರುದ್ಧವಾಗಿ ಸೈತಾನನು ತಂದ ಪ್ರತಿಯೊಂದು ಶೋಧನೆಗೆ ಯೇಸುವಿನ ಬಳಿ ದೇವರ ವಾಕ್ಯವಿತ್ತು. ನಾವೀಗ ಯೇಸು ಎದುರಿಸಿದ ಶೋಧನೆಗಳ ಒಳಗಿನ ಅರ್ಥವನ್ನು ನೋಡುವದು ಒಳ್ಳೆಯದು, ಯಾಕೆಂದರೆ ಸೈತಾನನು ನಮ್ಮನ್ನೂ ಕೂಡ ಅದೇ ರೀತಿಯಲ್ಲಿ ಶೋಧಿಸುತ್ತಾನೆ.

 • 1. ಸ್ವಾರ್ಥತೆ (ಮತ್ತಾಯ 4:1-4): ಕಲ್ಲನ್ನು ರೊಟ್ಟಿಯನ್ನಾಗಿ ಮಾಡಿ ಸ್ವಂತ ಹಸಿವೆಯನ್ನು ತೀರಿಸಿಕೊಳ್ಳು.
 • i). ಆತ್ಮಿಕ ಅವಶ್ಯಕತೆಗಳಿಗಿಂತ ದೈಹಿಕ ಅವಶ್ಯಕತೆಗಳನ್ನು ಹೆಚ್ಚೆಂದು ನೋಡುವದು. ಆದರೆ ಯೇಸು ಹೇಳಿದ್ದೇನೆಂದರೆ - ಮನುಷ್ಯನು ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕೆ ಹೊರತಾಗಿ ಕೇವಲ ರೊಟ್ಟಿಯಿಂದ ಮಾತ್ರವಲ್ಲ.

  ii). ದೇವರು ನಿಮಗೆ ಕೊಟ್ಟಿರುವಂತಹ ವರವನ್ನು ನಿಮ್ಮ ಅಗತ್ಯಕ್ಕೆ ಮಾತ್ರ ಉಪಯೋಗಿಸುವಂಥದ್ದು. ಈ ರೀತಿಯಾಗಿ ನಡೆಯಲು ಯೇಸು ನಿರಾಕರಿಸಿದನು. ಆತನು ತನ್ನ ವರವನ್ನು ಐದು ಸಾವಿರ ಜನರಿಗೆ ಊಟ ಕೊಡಲು ಉಪಯೋಗಿಸಿದನು. ಆದರೆ ತನ್ನ ಸ್ವಾರ್ಥಕ್ಕೆ ಅದನ್ನು ಉಪಯೋಗಿಸಲಿಲ್ಲ. ಅನೇಕ ಸೇವಕರು ತಮಗೆ ದೇವರು ಕೊಟ್ಟ ವರವನ್ನು ತಮ್ಮ ಸ್ವಂತ ಲಾಭಕ್ಕೆ ಉಪಯೋಗಿಸಿಕೊಂಡು ಈ ಶೋಧನೆಯಲ್ಲಿ ಬಿದ್ದುಹೊಗಿದ್ದಾರೆ.

 • 2. ತಪ್ಪಾದ ನಂಬಿಕೆ/ವಿಶ್ವಾಸ.ಮತ್ತಾಯ 4:5-7): ಗುಡ್ಡದ ಮೇಲಿನ ದೇವಾಲಯದ (ಗೋಪುರದ) ತುತ್ತ ತುದಿಯಿಂದ ಕೆಳಗೆ ಧುಮುಕಿ ದೇವರ ವಾಗ್ದಾನವನ್ನು ಪೂರೈಸಲು ಪ್ರಯತ್ನಿಸುವದು.
 • i). ದೇವರು ಸೂಚಿಸದೇ ಇರುವ ಕ್ರಮವನ್ನು ತೆಗೆದುಕೊಂಡು ಆತನ ವಾಗ್ದಾನವನ್ನು ಪೂರೈಸಲು ಕೇಳಿಕೊಳ್ಳುವದು. ಯೇಸು ಇದಕ್ಕೆ ಹೇಳಿದ್ದೆನೆಂದರೆ-ಇಂತಹ ಅಪಾಯಕಾರಿ ಕೆಲಸಗಳಿಂದ ದೇವರನ್ನು ನಾವು ಪರೀಕ್ಷಿಸಬಾರದು. ಆದರೆ ಕೆಲವು ಮೂರ್ಖ ಕ್ರೈಸ್ತರು ಅನಾರೋಗ್ಯದಿಂದಿರುವಾಗ ಔಷಧಿ ಆತನ ವಾಗ್ದಾನವನ್ನು ಪೂರೈಸಲು ಕೇಳಿಕೊಳ್ಳುವದು. ಯೇಸು ಇದಕ್ಕೆ ಹೇಳಿದ್ದೆನೆಂದರೆ-ಇಂತಹ ಅಪಾಯಕಾರಿ ಕೆಲಸಗಳಿಂದ ದೇವರನ್ನು ನಾವು ಪರೀಕ್ಷಿಸಬಾರದು. ಆದರೆ ಕೆಲವು ಮೂರ್ಖ ಕ್ರೈಸ್ತರು ಅನಾರೋಗ್ಯದಿಂದಿರುವಾಗ ಔಷಧಿಯನ್ನು ತೆಗೆದುಕೊಳ್ಳದೇ ದೇವರಿಂದ ಅದ್ಭುತವಾಗಿ ಗುಣಹೊಂದಬೇಕೆಂದು ಅಪೇಕ್ಷಿಸುತ್ತಾರೆ. ಇದು ನಂಬಿಕೆಯಲ್ಲ. ಇದು ಕುರುಡು ನಂಬಿಕೆಯಾಗಿದೆ. ಇದು ಆತ್ಮಹತ್ಯೆಯಾಗಿದೆ. ದೇವರು ಸೃಷ್ಟಿಸಿದ ವಸ್ತುಗಳನ್ನು ಉಪಯೋಗಿಸಿ ಔಷಧಿಗಳನ್ನು ತಯಾರಿಸಿರುವಾಗ ನಾವು ಅವನ್ನು ಉಪಯೋಗಿಸಬೇಕು. ದೇವಾಲಯದ ಗೋಪುರದ ತುತ್ತತುದಿಯಿಂದ ಕೆಳಗಿಳಿದು ಬರಲು ಮೆಟ್ಟಲುಗಳನ್ನು ಮಾಡಿರುವಾಗ ನಾವು ಅವನ್ನು ಉಪಯೋಗಿಸಬೇಕು ಅದನ್ನು ಬಿಟ್ಟು ಅಲ್ಲಿಂದ ಕೆಳಗೆ ಧುಮುಕಬಾರದು. ಹಾಗೆ ಕೆಳಗೆ ಧುಮುಕಿದರೆ ದೇವರು ನಮ್ಮನ್ನು ರಕ್ಷಿಸುವದಿಲ್ಲ. ಒಂದು ವೇಳೆ ಕಾಡಿನಲ್ಲಿದ್ದು, ನಮಗೆ ಔಷಧಿಯಿಲ್ಲದಿರುವಾಗ ನಮಗೆ ಒಳ್ಳೆಯ ಆರೋಗ್ಯ ಕೊಡು ಎಂದು ನಾವು ದೇವರಲ್ಲಿ ಬೇಡಿಕೊಂಡಾಗ ಆತನು ನಮ್ಮನ್ನು ಗುಣಪಡಿಸುತ್ತಾನೆಯೇ ಹೊರತು ಔಷಧಿಗಳನ್ನು ಕೊಟ್ಟ ಮೇಲೂ ಅದ್ಭುತಕ್ಕಾಗಿ ಕಾಯುವವರನ್ನಲ್ಲ.

  ii). ದೇವರ ಮನುಷ್ಯನೆಂದೆಣಿಸಿಕೊಳ್ಳಲು ಗಮನ ಸೆಳೆಯುವಂಥ ಕೆಲಸವೊಂದನ್ನು ನೀನು ಮಾಡು. ಇದು ಮನುಷ್ಯನ ಗೌರವವನ್ನು ಪಡೆಯಲು ಯತ್ನಿಸುವ ಶೋಧನೆಯಾಗಿದೆ. ಮನುಷ್ಯನ ಗೌರವವನ್ನು ಪಡೆದುಕೊಳ್ಳುವುದಕ್ಕಾಗಿ ಯೇಸು ಯಾವುದೇ ಅದ್ಭುತ ಕಾರ್ಯವನ್ನು ಮಾಡಲು ನಿರಾಕರಿಸಿದನು.

 • 3. ರಾಜಿ ಮಾಡಿಕೊಳ್ಳುವದು (ಮತ್ತಾಯ 4:8-10). ಸೈತಾನನಿಗೆ ತಲೆ ಬಾಗುವದರಿಂದ ಪ್ರಪಂಚದ ಎಲ್ಲಾ ರಾಜ್ಯಗಳು ಮತ್ತು ಅವುಗಳ ವೈಭವವನ್ನು ಪಡೆಯಲು ಶೋಧನೆ.
 • i) ಒಳ್ಳೆಯದನ್ನು ತಪ್ಪಾದ ಮಾರ್ಗದಿಂದ ಅಥವಾ ಅನೀತಿಯ ಮೂಲಕ ಪಡೆಯುವದು. ಈ ಅನೀತಿಯಿಂದಾಗಿ ನಾವು ಸೈತಾನನಿಗೆ ತಲೆಬಾಗಬೇಕಾಗುತ್ತದೆ. ಆದರೆ ಯೇಸು ಧೀರ್ಘ ಕಾಲವುಳ್ಳ ಕಠಿಣವಾದ ದಾರಿಯಾದ ಶಿಲುಬೆಯ/ಕ್ರೂಜೆಯ ದಾರಿಯನ್ನು ಅನುಸರಿಸಿದನು ಮತ್ತು ಎಲ್ಲ ತರಹದ ಅಡ್ಡಹಾದಿಗಳನ್ನು ತ್ಯಜಿಸಿದನು.

  ii). ಲೋಕದ ವೈಭವವನ್ನು ಬೆನ್ನತ್ತುವುದು. ಅದು ಹಣವಾಗಲಿ, ಗೌರವವಾಗಲಿ ಇಲ್ಲವೆ ಸ್ಥಾನಮಾನ ಅಥವಾ ಅಧಿಕಾರವೇ (ಪ್ರಪಂಚದಲ್ಲಿ ಅಥವಾ ಸಭೆಯಲ್ಲಿ) ಇರಲಿ. ಕೇವಲ ಕರ್ತನಾದ ದೇವರನ್ನೇ ನಾವು ಆರಾಧಿಸಬೇಕೇ ವಿನ: ಸೈತಾನನ್ನಾಗಲಿ, ಹಣವನ್ನಾಗಲಿ ಅಥವಾ ಆತನು ಕೊಡುವ ಎಂಥದ್ದೇ ವಸ್ತುವನ್ನಾಗಲೀ ನಾವು ಆರಾಧಿಸುವಂತಿಲ್ಲವೆಂದು ಯೇಸು ಸ್ಪಷ್ಟವಾಗಿ ಹೇಳಿದನು. ತಮ್ಮ ಸೇವಾಕಾರ್ಯವನ್ನು ವಿಸ್ತರಿಸುವುದಕ್ಕಾಗಿ ಅನೇಕ ಬೋಧಕರು ಕೆಲವು ವಿಷಯಗಳಲ್ಲಿ ಸುಮ್ಮನಿರುತ್ತಾರೆ (ದೇವರು ಬೋಧಿಸಲು ಹೇಳಿದ ವಾಕ್ಯವನ್ನು ಬೋಧಿಸದೇ ಇದ್ದು ಅವುಗಳ ಬಗ್ಗೆ ಅವರು ಮೌನವಾಗಿರುತ್ತಾರೆ). ಈ ಮೂಲಕ ಅವರು ಅನೇಕರನ್ನು ಖುಶಿಪಡಿಸುತ್ತಾರೆ. ಈ ಮೂಲಕ ಅವರು ದೊಡ್ಡದಾದ ಸೇವಾಕಾರ್ಯವನ್ನು ಹೊಂದಿಕೊಳ್ಳುತ್ತಾರೆ. ಆದರೆ ಇದಕ್ಕಾಗಿ ಅವರು ಸೈತಾನನೆದುರಿಗೆ ಅಡ್ಡಬೀಳಬೇಕಾಗುತ್ತದೆ.

  ಸೈತಾನನು ಯಾವ ರೀತಿಯಲ್ಲಿ ಯೇಸುವನ್ನು ಶೋಧಿಸಿದನೋ ಅದೇ ರೀತಿಯಲ್ಲಿ ನಮ್ಮ ದಾರಿಯಲ್ಲೂ ಅಡ್ಡಗಾಲು ಹಾಕಲು ಅವನು ಪ್ರಯತ್ನಿಸುತ್ತಾನೆ. ಯೇಸುವು ದೇವರ ವಾಕ್ಯದ ಬಲದಿಂದ ಸೈತಾನನನ್ನು ಓಡಿಸಿದನು. ಅದೇ ರೀತಿಯಲ್ಲಿ, ನಾವೂ ದೇವರ ವಾಕ್ಯದ ಬಲದಿಂದಲೇ ಸೈತಾನನ್ನು ತೊಲಗಿಸಬಹುದು.