ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಅಸ್ಥಿವಾರದ ಸತ್ಯಗಳು
WFTW Body: 

1. ಅಶುದ್ಧತೆ :

ಅಶುದ್ಧತೆಯು ಮುಖ್ಯವಾಗಿ ನಮ್ಮ ಕಣ್ಣಿನ ಮುಖಾಂತರ ಮತ್ತು ಕಿವಿಯ ಮುಖಾಂತರ ನಮ್ಮ ಹೃದಯದೊಳಕ್ಕೆ ಪ್ರವೇಶಿಸುತ್ತದೆ. ನಂತರ ಈ ಅಶುದ್ಧತೆಯು ನಮ್ಮ ಹೃದಯದ ಹೊರಗಿನಿಂದ ಬಂದು, ಪ್ರಾಥಮಿಕವಾಗಿ ನಮ್ಮ ನಾಲಿಗೆಯ ಮುಖಾಂತರ ಮತ್ತು ಕಣ್ಣಿನ ಮುಖಾಂತರವಾಗಿ, ತಾನಾಗೇ ನಮ್ಮ ದೇಹದ ವಿವಿಧ ಅಂಗಗಳ ಮೂಲಕ ವ್ಯಕ್ತಪಡಿಸುತ್ತದೆ. ಯಾರಾದರೂ ಪವಿತ್ರತೆಯನ್ನು ಹುಡುಕುವುದಾದಲ್ಲಿ, ವಿಶೇಷವಾಗಿ ಆತನು ಏನು ನೋಡುತ್ತಾನೋ ಮತ್ತು ಏನು ಕೇಳುತ್ತಾನೋ, ಅದರ ಬಗ್ಗೆ ಬಹು ಎಚ್ಚರಿಕೆಯಿಂದಿರಬೇಕು. ಯೇಸು ಅಶುದ್ದತೆಯನ್ನು ಹೆಚ್ಚಾಗಿ ದ್ವೇಷಿಸಿದನು. ಅದರಂತೆ ಆತನು ತನ್ನ ಶಿಷ್ಯರಿಗೆ - ಅವರ ಬಲಗಣ್ಣು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಬಿಸಾಟು ಬಿಡುವಂತೆ ಮತ್ತು ಅವರ ಬಲಗೈ ಅವರನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಬಿಸಾಟು ಬಿಡುವಂತೆ ಹೇಳಿದನು. (ಮತ್ತಾಯ 5:27-29).

ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಬಲಗೈಯನ್ನು ಕತ್ತರಿಸಿ ಹಾಕುವಂತೆ, ಕಣ್ಣನ್ನು ತೆಗೆದು ಹಾಕುವಂತೆ ಯಾವಾಗ ಸಲಹೆ ನೀಡುತ್ತಾರೆ? ಪರಿಸ್ಥಿತಿಯು ತುಂಬಾ ಹದಗೆಟ್ಟಾಗ ಮಾತ್ರ. ಈ ಅಂಗಗಳನ್ನು ತೆಗೆದು ಹಾಕದಿದ್ದರೆ, ಇಡೀ ದೇಹವು ಸತ್ತು ಹೋಗುವ ಸಲುವಾಗಿ ವೈದ್ಯರು ಆ ರೀತಿ ಹೇಳುತ್ತಾರೆ. ಪಾಪವು ಸಹ ಇದೇ ರೀತಿಯಾಗಿದ್ದು, ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಪಾಪವು ತುಂಬಾ ಗಂಭೀರವಾಗಿದ್ದು, ಇದು ನಮ್ಮ ಇಡೀ ಜೀವಿತವನ್ನೇ ಅಪಾಯಕ್ಕೊಳಗಾಗುವಂತೆ ಮಾಡುತ್ತದೆ. ಅನೇಕ ವಿಶ್ವಾಸಿಗಳು ಇದನ್ನು ಗ್ರಹಿಸಿಕೊಳ್ಳುವುದಿಲ್ಲ ಮತ್ತು ಅದಕ್ಕಾಗಿಯೇ ಅವರು ತಮ್ಮ ನಾಲಿಗೆಯನ್ನು ಮತ್ತು ಅವರ ಕಣ್ಣನ್ನು ಉಪಯೋಗಿಸುವಾಗ ಅಜಾಗರುಕತೆಯಿಂದಿರುತ್ತಾರೆ. ನಾವು ನಮ್ಮ ಕಣ್ಣಿನಿಂದ ಮತ್ತು ನಾಲಿಗೆಯಿಂದ ಶೋಧಿಸಲ್ಪಟ್ಟಾಗ, ಕುರುಡರಂತೆಯೂ ಮತ್ತು ಮೂಕರಂತೆಯೂ ಇರಬೇಕು. ಇದು ಯೇಸುವಿನ ಮಾತಿನಲ್ಲಿರುವ ಅರ್ಥ.

2. ಅಪನಂಬಿಕೆ :

ಅಪನಂಬಿಕೆಯುಳ್ಳ ಹೃದಯವು ’ಕೆಟ್ಟ’ ಹೃದಯವಾಗಿದೆ ಎಂದು ಸತ್ಯವೇದವು ಹೇಳುತ್ತದೆ(ಇಬ್ರಿಯ 3:12). ಅಪನಂಬಿಕೆಗೋಸ್ಕರವಾಗಿ ಯೇಸು ತನ್ನ ಶಿಷ್ಯರನ್ನು ಏಳು ಬಾರಿ ಗದರಿಸಿದನು. (ಮತ್ತಾಯ 6:30 ; 8:26 ; 14:31 ; 16:8, 17:17-20 ; ಮಾರ್ಕ:16:14, ಲೂಕ :24:೨೫ ನೋಡಿ). ಇದನ್ನು ನೋಡುವುದಾದರೆ, ಆತನು ತನ್ನ ಶಿಷ್ಯರನ್ನು ಯಾವುದಕ್ಕೋಸ್ಕರವೂ ಈ ರೀತಿಯಾಗಿ ಗದರಿಸಿಲ್ಲ!! ಅಪನಂಬಿಕೆಯು ದೇವರಿಗೆ ಅಪಮಾನ ಮಾಡಿದಂತೆ. ಏಕೆಂದರೆ, ಭೂಲೋಕದಲ್ಲಿರುವಂತ ತಂದೆಯು ತನ್ನ ಮಕ್ಕಳನ್ನು ಆರೈಕೆ ಮಾಡಿದಷ್ಟು, ತನ್ನ ಮಕ್ಕಳಿಗೆ ಒದಗಿಸುವಷ್ಟು, ದೇವರು ತನ್ನ ಮಕ್ಕಳನ್ನು ಆರೈಕೆ ಮಾಡುವುದಿಲ್ಲ ಅಥವಾ ದೇವರು ತನ್ನ ಮಕ್ಕಳಿಗೆ ಏನನ್ನೂ ಒದಗಿಸುವುದಿಲ್ಲ ಎಂಬ ನಂಬಿಕೆ ಇಲ್ಲದಿರುವುದಾಗಿದೆ. ಈ ದಿನಗಳಲ್ಲಿ, ದೇವರಿಂದ ವಸ್ತುಗಳನ್ನು ಪಡೆದುಕೊಳ್ಳುವೆವು ಎಂಬ ನಕಲಿ ನಂಬಿಕೆಯನ್ನು ಸಹ ಬೋಧಿಸಲಾಗುತ್ತಿದೆ. ಯೇಸು ಬೋಧಿಸಿದಂತಹ ನಂಬಿಕೆಯು ಇದಾಗಿರಲಿಲ್ಲ. ನಮ್ಮ ಪ್ರತಿನಿತ್ಯ ಜೀವಿತದಲ್ಲಿ ಜೀವಿಸಲು ನಮಗೆ ನಂಬಿಕೆ ಇರಬೇಕೆಂದು ಆತನು ಬಯಸಿದನು. ಪರಲೋಕದಲ್ಲಿನ ಪ್ರೀತಿಯುಳ್ಳ ತಂದೆಯ ಮೇಲೆ ನಂಬಿಕೆ ಇಡುವುದರಿಂದ ಮತ್ತು ಆತನು ನಮಗಾಗಿ ತನ್ನ ವಾಕ್ಯಗಳಲ್ಲಿ ಕೊಟ್ಟಿರುವ ಅದ್ಭುತವಾದ ವಾಗ್ದಾನಗಳ ಮೇಲೆ ನಂಬಿಕೆ ಇಡುವುದರಿಂದ ಮಾತ್ರ ಖಿನ್ನತೆಯ ಮೇಲೆ ಜಯ ಹೊಂದಲು, ಮಂಕಾಗಿರುವುದರ ಮೇಲೆ ಜಯ ಹೊಂದಲು ಮತ್ತು ನಿರುತ್ಸಾಹಗೊಳ್ಳುವುದರ ಮೇಲೆ ಜಯ ಹೊಂದಲು ಸಾಧ್ಯ. ಯೇಸು ಆಶ್ಚರ್ಯಗೊಂಡಿದ್ದನ್ನು ಎರಡು ಬಾರಿ ನಾವು ಓದುತ್ತೇವೆ - ಒಂದು ಸಲ ಆತನು ’ನಂಬಿಕೆ’ ಯನ್ನು ನೋಡಿದಾಗ, ಮತ್ತೊಂದು ಸಲ ಆತನು ”ಅಪನಂಬಿಕೆ” ಯನ್ನು ನೋಡಿದಾಗ (ಮತ್ತಾಯ 8:10 ; ಮಾರ್ಕ 6:6).

ಯೇಸು ಯಾವಾಗಲಾದರೂ ಜನರಲ್ಲಿ ನಂಬಿಕೆಯನ್ನು ನೋಡಿದಾಗ ಸಂಭ್ರಮಿಸುತ್ತಿದ್ದನು ಮತ್ತು ಜನರು ಪರಲೋಕದಲ್ಲಿನ ಪ್ರೀತಿಯುಳ್ಳ ತಂದೆಯ ಮೇಲೆ ನಂಬಿಕೆ ಇಡಲು ಮನಸ್ಸು ಮಾಡದಿದ್ದಾಗ ಆತನು ನಿರಾಶೆಗೊಳ್ಳುತ್ತಿದ್ದನು.

3. ಆತ್ಮೀಕ ಗರ್ವ :

ಈ ಆತ್ಮೀಕ ಗರ್ವವು ಬಹು ಸಾಮಾನ್ಯ ಪಾಪವಾಗಿದ್ದು, ಯಾರು ಪವಿತ್ರತೆಯನ್ನು ಬೆನ್ನಟ್ಟುತ್ತಿರುತ್ತಾರೋ, ಅವರಲ್ಲಿ ಕಂಡುಬರುತ್ತದೆ. ತಾನೇ ನೀತಿವಂತನೆಂದು ತಿಳಿದ ಫರಿಸಾಯನು ತನ್ನ ಪ್ರಾರ್ಥನೆಯಲ್ಲಿಯೂ ಸಹ ಇತರರನ್ನು ಹೀನೈಸಿದ ಸಾಮ್ಯವು ನಮಗೆಲ್ಲರಿಗೂ ಗೊತ್ತಿದೆ. (ಲೂಕ:18:9-14)! ಬಹಿರಂಗ ಕೂಟಗಳಲ್ಲಿ ಶೇ.90 ಕ್ಕಿಂತ ಹೆಚ್ಚು ಪ್ರಾರ್ಥನೆಗಳು, ಪ್ರಾಥಮಿಕವಾಗಿ, ಕೇಳುತ್ತಿರುವವರನ್ನು ಮೆಚ್ಚಿಸುವುದಾಗಿರುತ್ತದೆಯೇ ಹೊರತು, ದೇವರಿಗೆ ಪ್ರಾರ್ಥಿಸುವುದಾಗಿರುವುದಿಲ್ಲ. ಸಾಮ್ಯದಲ್ಲಿರುವಂತ ಫರಿಸಾಯನು ತನ್ನ ಹೊರಗಿನ ಜೀವಿತದಲ್ಲಿ ಬೇರೆ ಪಾಪಿಗಳಂತೆ ಕೆಟ್ಟ ರೀತಿಯಲ್ಲಿ ಇಲ್ಲದೇ ಇರಬಹುದು. ಆದರೆ ಆತನು ತನ್ನ ಆತ್ಮೀಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಮತ್ತೊಬ್ಬರನ್ನು ಉದಾಸೀನ ಮಾಡಿದಂಥ ಆತನ ಗರ್ವವನ್ನು ಯೇಸು ದ್ವೇಷಿಸಿದನು. ವಿಶ್ವಾಸಿಗಳು ಬೇರೆ ವಿಶ್ವಾಸಿಗಳನ್ನು ಸತತವಾಗಿ ತೀರ್ಪು ಮಾಡುವುದು ಆತ್ಮೀಕ ಗರ್ವವಾಗಿದೆ.

ಹೇಗಾದರೂ, ತೆರಿಗೆ ವಸೂಲಿಗಾರನು, ತಾನು ಪಾಪಿಯೆಂದು ತನ್ನನ್ನೇ ನೋಡಿಕೊಂಡು - ಬೇರೆ ಎಲ್ಲರಿಗಿಂತ ಕೆಟ್ಟವನೆಂದುಕೊಂಡಿದ್ದರಿಂದ ಆತನು ದೇವರಿಂದ ಸ್ವೀಕರಿಸಲ್ಪಟ್ಟನು. ದೇವರೊಟ್ಟಿಗೆ ಮುಖಾಮುಖಿಯಾಗಿ ಬರುವವರು ಕೆಲವೊಮ್ಮೆ ತಮ್ಮನ್ನು ತಾವೇ ಮುಖ್ಯ ಪಾಪಿ ಎಂಬಂತೆ ನೋಡಿಕೊಳ್ಳುತ್ತಾರೆ.

ತಗ್ಗಿಸಿಕೊಳ್ಳುವವನು ಪರಲೋಕದಲ್ಲಿ ಹೆಚ್ಚಿನವನು ಎಂದು ಯೇಸು ಹೇಳಿದನು. (ಮತ್ತಾಯ 18:4). ಪರಲೋಕದಲ್ಲಿ ಕಾಣ ಬರುವಂತಹ ಬಹು ದೊಡ್ಡದಾದ ಸದ್ಗುಣವು ದೀನತೆಯಾಗಿದೆ. ಪ್ರಕಟಣೆಯಲ್ಲಿ ನಾವು ನೋಡುವುದಾದರೆ, ಯಾರ‍್ಯಾರು ಕಿರೀಟಗಳನ್ನು ಪರಲೋಕದಲ್ಲಿ ಸ್ವೀಕರಿಸುತ್ತಿದ್ದರೋ ಅವರು ತಕ್ಷಣವೇ ಕರ್ತನ ಪಾದಕ್ಕೆ ಬಿದ್ದು, ಪ್ರತಿ ಕೀರಿಟಕ್ಕೂ ನೀನೇ ಯೋಗ್ಯನಾಗಿದ್ದೀ ಎಂದು ಅರಿಕೆ ಮಾಡುತ್ತಾರೆ. (ಪ್ರಕಟಣೆ 4:10, 11).

ಒಂದು ವೇಳೆ ನಾವು ದೇವರ ”ಪ್ರತಿಯೊಂದು” ಆಜ್ಞೆಗೆ ವಿಧಯರಾಗುವುದನ್ನು ನಿಭಾಯಿಸಿದರೂ ಸಹ, ನಮ್ಮಿಂದ ಏನು ನಿರೀಕ್ಷಿಸಿತ್ತೋ ಅದಕ್ಕಿಂತ ಹೆಚ್ಚಾಗಿ ನಾವು ಏನು ಮಾಡದ, ಪ್ರಯೋಜನವಿಲ್ಲದ ಸೇವಕರಾಗಿಯೇ ಇರುತ್ತೇವೆ. (ಲೂಕ ೧೭:೧೦). ಹಾಗಾದರೆ, ಅನೇಕ ಸಲ ಬೀಳುವಂತ ನಮ್ಮ ಸ್ಥಿತಿಯ ಬಗ್ಗೆ ನಾವು ಏನು ಹೇಳೋಣ!