WFTW Body: 

1 ಯೋಹಾನ 2:6 ಹೇಳುವುದೇನೆಂದರೆ, "ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಆತನು ನಡೆದಂತೆಯೇ ತಾನೂ ನಡೆಯುವುದಕ್ಕೆ ಬದ್ಧನಾಗಿದ್ದಾನೆ"

ಯೇಸುವು ನಡೆದದ್ದು ಹೇಗೆ? ಆತನ ಜಯ ಸ್ವಲ್ಪ ಸಮಯಕ್ಕೆ ಮಾತ್ರವಾಗಿತ್ತೇ ಅಥವಾ ಬಹಳಷ್ಟು ಸಮಯಕ್ಕಾಗಿತ್ತೇ ಅಥವಾ ಎಲ್ಲಾ ಕಾಲದಲ್ಲಾಗಿತ್ತೇ? ಅದಕ್ಕೆ ಉತ್ತರ ನಮಗೆ ತಿಳಿದಿದೆ. ನಮ್ಮೆಲ್ಲರಂತೆ ಎಲ್ಲಾ ರೀತಿಯಲ್ಲಿ ಅವನು ಶೋಧಿಸಲ್ಪಟ್ಟಿದ್ದರೂ, ಅವನೆಂದಿಗೂ ಪಾಪ ಮಾಡಲಿಲ್ಲ.

"ಯಾಕೆಂದರೆ, ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದರೂ ಪಾಪರಹಿತನಾಗಿದ್ದನು" (ಇಬ್ರಿ. 4:15).

ಅವನು ನಡೆದಂತೆ ನಾವೂ ನಡೆಯಬೇಕೆಂದು ನಮಗೆ ಹೇಳಲಾಗಿದೆ. ಅದು ಈ ಭೂಮಿಯಲ್ಲಿ ಸಾಧ್ಯವೇ? ನಾವು ಮಾಡಬೇಕಾದ್ದನ್ನು ಮಾಡಲು ಸಾಧ್ಯವಿಲ್ಲವೆಂದು ತಿಳಿದಿದ್ದು ಅದನ್ನು ನಾವು ಮಾಡಬೇಕೆಂದು ದೇವರು ನಮಗೆ ಹೇಳುವನೇ? ಇಲ್ಲ. ಅದು ನಾವು ಕಲ್ಪಿಸಲಸಾಧ್ಯ. ಈ ಜಗತ್ತಿನ ತಂದೆಯವರು ಕೂಡ ತಮ್ಮ ಮಕ್ಕಳ ಮೇಲೆ ಅಂಥಹ ಕಾರಣರಹಿತ ಬೇಡಿಕೆಗಳನ್ನು ಹೇರುವುದಿಲ್ಲ. ಹಾಗಿದ್ದರೆ ದೇವರು ಅದನ್ನು ನಮಗೆ ಮಾಡಿಯಾನೇ!

ಹೊಸ ಒಡಂಬಡಿಕೆಯಲ್ಲಿ ಬರೆದ ಅತೀ ಬೇಸರದ ಮಾತುಗಳು ಮತ್ತಾಯ 13:58ರಲ್ಲಿ ಕಾಣಸಿಗುತ್ತವೆ - "ಆತನು ಅವರ ಅಪನಂಬಿಕೆಯೆ ದೆಸೆಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ".

ಮಾರ್ಕ 6:5ರಲ್ಲಿ ಕೂಡ ಇದೇ ಸಂಗತಿಯ ಮಾತು ಹೀಗಿದೆ, "ಅಲ್ಲಿ ಅವನು ಯಾವ ಮಹತ್ಕಾರ್ಯಗಳನ್ನೂ ಮಾಡಲಾಗಲಿಲ್ಲ".

ತನ್ನ ಸ್ವಂತ ಊರಿನಲ್ಲಿನ ಜನರಿಗೆ ಅವನು ಬಹಳ ಮಹತ್ಕಾರ್ಯಗಳನ್ನು ಮಾಡಬೇಕೆಂದಿದ್ದನು. ಆದರೆ ಅವರ ಅಪನಂಬಿಕೆಯಿಂದ ಅವನು ಮಿತಿಗೊಳಿಸಲ್ಪಟ್ಟನು. ದೇವರು ನಮಗೆ ಮಾಡಬೇಕೆಂದು ಬಯಸುವ ವಿಷಯಗಳನ್ನು ಮಾಡದಂತೆ, ಅಪನಂಬಿಕೆಯು ಸರ್ವಶಕ್ತ ದೇವರ ಕೈಯನ್ನು ಕಟ್ಟುತ್ತದೆ.

ನಿನ್ನ ಜೀವಿತದಲ್ಲಿ ದೇವರು ಮಾಡಬೇಕೆಂದಿರುವ ಅದ್ಭುತಗಳು ಇರಬಹುದು, ಆದರೆ ನಿನ್ನ ಅಪನಂಬಿಕೆಯಿಂದ ಮಾಡಲಾರದೇ ಇರಬಹುದು. ನ್ಯಾಯತೀರ್ಪಿನ ದಿನ ನಮ್ಮಲ್ಲಿ ಯಾರಾದರೂ ಈ ಮಾತುಗಳನ್ನು ಕೇಳಬೇಕೋ, "ನಾನು ನಿನಗಾಗಿ ಮತ್ತು ನಿನ್ನ ಮೂಲಕವಾಗಿ ಮಾಡಬೇಕೆಂದಿರುವ ಎಲ್ಲವನ್ನೂ ನಿನ್ನ ಅಪನಂಬಿಕೆಯ ನಿಮಿತ್ತ ಮಾಡಲಾಗಲಿಲ್ಲ?" ಎಂದು. ನಮ್ಮ ಭೂಲೋಕದ ಜೀವನದ ಕಡೆಗೆ ನಾವದನ್ನು ಕಂಡುಕೊಳ್ಳುವುದಾದರೆ, ನಮ್ಮ ಹೃದಯದಲ್ಲಿ ಎಂಥಹ ಬೇಸರವಿರುವುದು! ಅದರ ಬಗ್ಗೆ ಈಗಲೇ ಯೋಚಿಸುವುದು ಒಳ್ಳೆಯದು.

ಪಾಪದ ಮೇಲಿನ ಜಯದ ಜೀವಿತಕ್ಕೆ ಪ್ರವೇಶಿಸುವುದರಲ್ಲೂ ಇದೇ ತತ್ವ ಅಳವಡಿಕೆಯಾಗುತ್ತದೆ. ದೇವರಿಂದ ಇದು ಸಾಧ್ಯ ಮತ್ತು ನಮಗೆ ಅಂಥಹ ಜೀವನಕ್ಕೆ ದೇವರು ಮುನ್ನಡೆಸುತ್ತಾನೆ ಎಂದು ನಾವು ನಂಬುವ ತನಕ ನಾವು ಉಪವಾಸ, ಪ್ರಾರ್ಥನೆ ಮಾಡಿ, ಬಾಯಾರಿದರೂ ನಾವು ಕಿಂಚಿತ್ತೂ ಪ್ರಗತಿ ಹೊಂದದೆ ಇರಬಹುದು.

ನಂಬಿಕೆಯ ಹೊರತಾಗಿ ದೇವರಿಂದ ನೀನು ಏನನ್ನೂ ಪಡೆಯಲಾರೆ ಎಂದು ಸೈತಾನನಿಗೆ ತಿಳಿದಿದೆ. ಆದ್ದರಿಂದ ಅವನು ನಿನ್ನ ಹೃದಯವನ್ನು ಅಪನಂಬಿಕೆಯಿಂದ ತುಂಬಲು ಎಷ್ಟೊಂದು ಪ್ರಯತ್ನಿಸುತ್ತಿದ್ದಾನೆಂದು ನೀನು ಕಲ್ಪಿಸಬಹುದು. ಅಪನಂಬಿಕೆಯು, ಸುಳ್ಳು ಮತ್ತು ವ್ಯಭಿಚಾರಕ್ಕಿಂತಲೂ ಬಹಳ ಅಪಾಯಕಾರಿ. ಏಕೆಂದರೆ, ಇವೆರಡೂ ಪಾಪಗಳೆಂದು ಸುಲಭವಾಗಿ ತಿಳಿಯಲ್ಪಟ್ಟಿವೆ ಆದರೆ ಅಪನಂಬಿಕೆಯಲ್ಲ.

ಇಬ್ರಿಯ 3:12 ಹೇಳುವುದೇನೆಂದರೆ, "ಸಹೋದರರೇ, ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಜೀವಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು" ಎಂದು.

ಅಪನಂಬಿಕೆಯಿಂದ ತುಂಬಿದ ಕೆಟ್ಟ ಹೃದಯವು ನಾವು ದೇವರನ್ನು ಬಿಟ್ಟು ದೂರ ಹೋಗುವಂತೆ ನಮ್ಮನ್ನು ಮಾಡುತ್ತದೆ. ಅಪನಂಬಿಕೆಯು ಇತರ ಎಲ್ಲಾ ಪಾಪಗಳ ಮೂಲವಾಗಿದೆ.

ರೋಮಾ. 6:14 ಹೇಳುವುದೇನೆಂದರೆ, "ಪಾಪವು ನಿನ್ನ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನೆಂದರೆ, ನೀವು ನ್ಯಾಯಪ್ರಮಾಣಾಧೀನರಲ್ಲ, ಕೃಪೆಗೆ ಅಧೀನರಾಗಿದ್ದೀರಿ".

ಪವಿತ್ರಾತ್ಮನು ಇಲ್ಲಿ ಸ್ಪಷ್ಟವಾಗಿ ಹೇಳುವುದೇನೆಂದರೆ, ನಾವು ಕೃಪೆಯ ಅಧೀನರಾಗಿದ್ದಲ್ಲಿ, ಪಾಪವು ನಮ್ಮ ಮೇಲೆ ಅಧಿಕಾರ ನಡೆಸದು. ಅದು ಇಷ್ಟೊಂದು ಸ್ಪಷ್ಟವಾಗಿ ಬರೆಯಲ್ಪಟ್ಟಿದೆಯೆಂದರೆ, ಒಂದು ಸಣ್ಣ ಮಗು ಕೂಡ ಅದನ್ನು ಅರ್ಥಮಾಡಿಕೊಳ್ಳಬಹುದು. ಅದಾಗ್ಯೂ, ಪಾಪದ ಮೇಲೆ ಜಯ ಹೊಂದಿದ ಜೀವಿತವನ್ನು ಜೀವಿಸುವ ಸಾಧ್ಯತೆಯನ್ನು ಅನೇಕ ವಿಶ್ವಾಸಿಗಳು ನಂಬುವುದಿಲ್ಲ.

ನೀನು ಜಯದಲ್ಲಿ ಜೀವಿಸಬೇಕೆಂದು ದೇವರು ಬಯಸುತ್ತಾನೆ. ನೀನು ಎಷ್ಟು ವರ್ಷಗಳಿಂದ ಕೋಪದಿಂದ ಸೋಲಿಸಲ್ಪಟ್ಟಿದ್ದರೂ ಅಥವಾ ನಿನ್ನ ಯೋಚನಾ-ಜೀವನ ಬಹಳ ಕೆಟ್ಟದ್ದಾಗಿದ್ದರೂ ಪರವಾಗಿಲ್ಲ. ದೇವರು ನಿನ್ನನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಿ ನಿನಗೆ ಶುದ್ಧ ಹೃದಯವನ್ನು ಕೊಡಬಲ್ಲರು. ಆದರೆ ನೀನು ನಂಬುವ ತನಕ ದೇವರು ಅದನ್ನು ನಿನಗೆ ಮಾಡಲಾರರು.

ಸತ್ಯವೇದವು ಹೇಳುವುದೇನೆಂದರೆ, ‘ನಾವು ನಮ್ಮ ಹೃದಯದಲ್ಲಿ ನಂಬುವುದನ್ನು ನಮ್ಮ ಬಾಯಿಂದ ಅರಿಕೆಮಾಡಬೇಕು’ ಎಂದು.

ರೋಮಾ. 10:10 ಹೇಳುವುದೇನೆಂದರೆ, "ಹೃದಯದಲ್ಲಿ ನಂಬುವುದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವುದರ ಮೂಲಕ ರಕ್ಷಣೆಯಾಗುತ್ತದೆ" ಎಂದು.

ಇದೊಂದು ಮುಖ್ಯವಾದ ತತ್ವ - ನಮ್ಮ ಬಾಯಿಯ ಅರಿಕೆಯ ಮೂಲಕ ನಾವು ನಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತೇವೆ. ಇದು ನಮ್ಮನ್ನು ಪಾಪದ ಬಲದಿಂದ ಬಿಡುಗಡೆಗೊಳಿಸುತ್ತದೆ. ಆದ್ದರಿಂದ "ಪಾಪದ ಮೇಲಿನ ಜಯದ ಜೀವಿತಕ್ಕೆ ದೇವರು ನನ್ನನ್ನು ಮುನ್ನಡೆಸುತ್ತಾನೆಂದು ನಾನು ನಂಬುತ್ತೇನೆ" ಎಂದು ನಾವು ನಮ್ಮ ಸಾಕ್ಷಿಯ ಮಾತನ್ನು ಸೈತಾನನಿಗೆ ಮಾತನಾಡಲೇಬೇಕು. ಈ ರೀತಿಯಾಗಿ ನಾವು ಸೈತಾನನನ್ನು ಜಯಿಸಬಹುದು.

"ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವನನ್ನು(ಸೈತಾನನ್ನು) ಜಯಿಸಿದರು" (ಪ್ರಕ. 12:11).

ಜಯವು ನಿನ್ನ ಜೀವನದಲ್ಲಿ ನಿಜವಾಗುವ ತನಕ, ಪ್ರತೀ ಸಲ ನೀನು ಬೀಳುವಾಗ, ಆ ಅರಿಕೆಯನ್ನು ನೀನು ಮಾಡುತ್ತಾ ಇರು. ಅದು ಒಂದೇ ಸಲ ಆಗದಿದ್ದರೆ ನಿರುತ್ಸಾಹಗೊಳ್ಳಬೇಡ. ದೇವರು ನಿನ್ನ ಬಾಯಿಯ ಅರಿಕೆಯನ್ನು ಗೌರವಿಸುವನು.