ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಯೌವನಸ್ಥರಿಗೆ
WFTW Body: 

ಒಬ್ಬರ ಜೀವನದಲ್ಲಿ ತೀವ್ರವಾದ ನೋವನ್ನು ಅನುಭವಿಸುವದರಿಂದಲೇ ಮಾತ್ರ ನಾವು ಪರಿಣಾಮಕಾರಿಯಾದ ದೇವರ ಸೇವೆಯನ್ನು ಮಾಡಲಿಕ್ಕಾಗುವದೆಂದು ಹೋಶೇಯ ಪ್ರವಾದಿಯು ತಿಳಿಸುತ್ತಾನೆ. ದೇವರು ಇದನ್ನು ವಿಧವಿಧವಾದ ರೀತಿಯಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಕಾರ್ಯಗತ ಮಾಡುತ್ತಾನೆ. ಆತನು ಒಂದೇ ನಿರ್ಧಿಷ್ಟವಾದ ಕ್ರಮದಿಂದ ತನ್ನ ಎಲ್ಲಾ ಮಕ್ಕಳನ್ನು ನಡಿಸುವದಿಲ್ಲ.

ಕರ್ತನು ಹೋಶೇಯನಿಗೆ ಒಬ್ಬ ಕಠಿಣ ಹೆಂಡತಿಯಿಂದ ಪಾಠ ಕಲಿಸಿದರೆ, ಯೆರಮಿಯನನ್ನು ಹೆಂಡತಿಯಿಲ್ಲದೆ ಅತೀ ಆಳವಾದ ಗುಂಡಿಯಲ್ಲಿ ಹಾಕುವುದರ ಮೂಲಕ ಕಲಿಸಿದನು. ಅದೇ ರೀತಿಯಾಗಿ ಪೌಲನಿಗೂ ಕೂಡ ಹೆಂಡತಿಯಿಲ್ಲದೆ ಪಾಠ ಕಲಿಸಿದನು. ಹಾಗಿದ್ದಾಗ ಎಲ್ಲರಿಗೂ ಒಂದೇ ಕ್ರಮವಾಗಿ ದೇವರು ನಡಿಸುವದಿಲ್ಲ, ಆದರೆ ಮೂಲ ಸಿದ್ಧಾಂತ (ತತ್ವ) ಒಂದೇಯಾಗಿದೆ. ಕರ್ತನಿಂದ ಸೇವೆ ಬೇಕಾದರೆ ನಾವು ಕಷ್ಟಗಳನ್ನು ಅನುಭವಿಸಲೇ ಬೇಕು.

ಪೌಲನು ೨ನೇ ಕೊರಿಂಥ ೧:೪ ರಲ್ಲಿ ಹೀಗೆ ಹೇಳುತ್ತಾನೆ "ಸಕಲವಿಧವಾಗಿ ಸಂತೈಸುವ ದೇವರೂ ಆಗಿದ್ದು ನಮಗೆ ಸಂಭಿವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ, ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ."

ಈ ರೀತಿಯಾದ ಅನುಭವವಿಲ್ಲದೇ ಹೊದರೆ ನಾವು ಇನ್ನೊಬ್ಬರಿಗೆ ಹುರುಳಿಲ್ಲದ ಜ್ಞಾನವನ್ನು ಸಾಗಿಸುತ್ತೇವೆ.

ಹೋಶೇಯನು ಗೋಮೆರಳನ್ನು ಮದುವೆಯಾದನು, ಆದರೆ ಅವಳಿಗೆ ವ್ಯಭಿಚಾರದಿಂದ ಹುಟ್ಟಿದ ಮಕ್ಕಳೂ ಕೂಡ ಇದ್ದವು. ಅವಳ ಮೊದಲನೇ ಮಗ ಹೋಶೇಯನಿಂದ ಹುಟ್ಟಿದ್ದಾಗಿತ್ತು, ಆದರೆ ಇನ್ನುಳಿದ ಎರಡು ಮಕ್ಕಳು ಬಹುಶ ಅವನದಲ್ಲದಾಗಿದ್ದವು.

ಇನ್ನುಳಿದ ಎರಡು ಮಕ್ಕಳ ಹೆಸರಿನ ಮೇಲೆ ದೇವರ ದಂಡನೆ ತನ್ನ ಸ್ವಕೀಯ ಜನರ ಮೇಲೆ ಬರುವದನ್ನು ಪ್ರಕಟಪಡಿಸುತ್ತದೆ. ಹೋಶೇಯ ೨:೭ ರಲ್ಲಿ ದೇವರು ಹೀಗೆ ಹೇಳುತ್ತಾನೆ, "ಅವಳು ತನ್ನ ಮಿಂಡರನ್ನು ಹಿಂದಟ್ಟಿದರೂ ಅವರನ್ನು ಸಂಧಿಸಳು; ಅವರನ್ನು ಹುಡುಕಿದರೂ ಅವರು ಸಿಕ್ಕರು; ಆಗ ಅವಳು - ನನ್ನ ಮದುವೆಯ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು, ಈಗಿನ ನನ್ನ ಸ್ಥಿತಿಗಿಂತ ಆಗಿನ ಸ್ಥಿತಿಯು ಎಷ್ಟೋ ಲೇಸು ಅಂದುಕೊಳ್ಳುವಳು".

ಹೋಶೇಯನ ಹೆಂಡತಿಯು ಇಸ್ರಾಯೇಲ್ ಜನರು ದೇವರಿಂದ ತೊಲಗಿದಂತೆ ತನ್ನ ಗಂಡನಿಂದ ದೂರ ಹೊಗಿದ್ದಳು. ಆದರೆ ಇಸ್ರಾಯೇಲ್ ಸಂಕಷ್ಟದಲ್ಲಿದ್ದಾಗ ತಿರುಗಿ ದೇವರಲ್ಲಿ ಪ್ರಾರ್ಥಿಸಿದಳು. ಅನೇಕರು ಈ ರೀತಿಯಲ್ಲಿ ಕಷ್ಟದಲ್ಲಿದ್ದಾಗ ಮಾತ್ರ ದೇವರನ್ನು ಸಂಧಿಸುತ್ತಾರೆ. ಯಾವಾಗ ಹಣದಿಂದ ತಮ್ಮ ಕಷ್ಟ ಪರಿಹಾರ ವಾಗದಿರುವಾಗ , ಜಗತ್ತಿನಲ್ಲಿರುವ ಜನರು ತಮ್ಮನ್ನು ಕೈ ಬಿಟ್ಟಾಗ ತಮ್ಮನ್ನು ದೇವರ ಕಡೆ ಸಹಾಯಕ್ಕೊಸ್ಕರ ತಿರುಗಿಸುತ್ತಾರೆ, ಮತ್ತು ದೇವರು ಅವರಿಗೆ ಸಹಾಯ ದಯಪಾಲಿಸುತ್ತಾನೆ. ಅದೇ ರೀತಿಯಲ್ಲಿ ದೇವರು ಹೋಶೇಯನಿಗೆ "ನಿನ್ನ ಹೆಂಡತಿಯನ್ನು ತಿರುಗಿ ಸ್ವೀಕರಿಸು, ಅವಳು ನಿನ್ನ ಬಳಿಗೆ ಕೊನೆಯ ಆಶ್ರಯವೆಂಬುದಾಗಿ ಬಂದರೂ ಕೂಡ". ಎಂದು ಹೇಳುತ್ತಾನೆ.

ಹೋಶೇಯ ೨:೮ ರಲ್ಲಿ ದೇವರು ಹೇಳುತ್ತಾನೆ "ತನ್ನ ಧಾನ್ಯ ದ್ರಾಕ್ಷಾರಸತೈಲಗಳು ನನ್ನಿಂದ ದೊರೆತವುಗಳೆಂದೂ ಬಾಳನ ಪೂಜೆಗೆ ಉಪಯೋಗಿಸಿದ ಬೆಳ್ಳಿ ಬಂಗಾರಗಳು ನನ್ನ ಧಾರಾಳವಾದ ವರವೆಂದೂ ಅವಳಿಗೆ ತಿಳಿಯದು." ಈ ವಾಕ್ಯ ನಮಗೂ ಕೂಡ ಅನ್ವಯಿಸುತ್ತದೆ. ನಿಮ್ಮ ಹತ್ತಿರಿರುವದೆಲ್ಲವೂ ದೇವರಿಂದ ಬಂದಿದೆಯೆಂದು ನೀವು ಬಲ್ಲಿರೋ? ನಿಮ್ಮ ಆರೋಗ್ಯ ದೇವರ ಕೊಡುಗೆ ಎಂಬುದು ತಿಳಿದಿದೆಯಾ? ಅಷ್ಟೇ ಅಲ್ಲ ನಿಮ್ಮಲ್ಲಿರುವ ಹಣವೂ ಕೂಡ ದೇವರಿಂದ ಬಂದಿರುವಂಥದ್ದು. ನಿಮ್ಮ ಜ್ಞಾನವೂ ಕೂಡ ದೇವರ ವರ/ಕೊಡುಗೆಯಾಗಿದೆ.

ಇಸ್ರಾಯೇಲ್ಯರು ತಮ್ಮಲ್ಲಿರುವಂಥ ಬೆಳ್ಳಿ, ಬಂಗಾರಗಳನ್ನು ಬಾಳನ ಪೂಜೆಗೆ ಉಪಯೋಗಿಸಿದರು. ಈ ಜಗತ್ತು ಮತ್ತು ಇದರ ನಶಿಸಿ ಹೊಗುವಂಥ ಆಶೆಗಳಿಗಾಗಿ ದೇವರು ಕೊಟ್ಟವರಗಳನ್ನು ನೀವು ಉಪಯೋಗಿಸುತ್ತಿದ್ದಿರಾ?

ದಾರಿ ತಪ್ಪಿ ಹೋದ ಮಗನ ದೃಷ್ಟಾಂತ ನೆನಪಿದೆಯಾ? ಯಾವ ರೀತಿಯಾಗಿ ಆತನು ತನ್ನ ತಂದೆಯಿಂದ ಹಣ ಹೊಂದಿಕೊಂಡು ತಂದೆಯ ಕೆಲಸಗಳಲ್ಲಿ ತೊಡಗಿಸದೇ, ತನ್ನ ಸ್ವಂತ ಸ್ವಾರ್ಥದ ಮೇಲೆ ಉಪಯೋಗಿಸಿದನು. ಇದು ದೇವರಿಂದ ಆತನ ಪ್ರೀತಿಯ ಝಳದಿಂದ ಹಿಂಜರಿದ ಜನರ ಗುರುತು ಆಗಿದೆ. ಇಂಥವರು ದೇವರಿಂದ ಅನೇಕ ದಾನಗಳನ್ನು ಹೊಂದಿದಾಗ್ಯು ಇದರಿಂದ ಅವರು ಏನು ಮಾಡುತ್ತಾರೆ? ಅವರು ಹೀಗೆ ಆಲೋಚನೆ ಮಾಡುತ್ತಾರೆ- "ಇದು ನನ್ನ ದೇಹ, ಇದನ್ನು ನನ್ನಿಷ್ಟ ತಕ್ಕಂತೆ ಉಪಯೋಗಿಸುತ್ತೇನೆ. ಇದು ನನ್ನ ಬುದ್ಧಿ ಮಟ್ಟ, ಇದನ್ನು ನನ್ನ ಒಳಿತಿಗಾಗಿ ಸಾಧ್ಯವಾದಷ್ಟು ನನಗಾಗಿ ಉಪಯೋಗಿಸುತ್ತೇನೆ. ಇದು ನನ್ನ ಹಣ , ನಾನು ಸಂಪಾದಿಸಿರುವಂಥದ್ದು ನನ್ನ ಮನಸ್ಸಿಗೆ ಬಂದಂತೆ ಖರ್ಚು ಮಾಡುತ್ತೇನೆ."

ದೇವರು ಕೊಟ್ಟ ಬೆಳ್ಳಿ, ಬಂಗಾರಗಳನ್ನು ಬಾಳ ಪೂಜೆಗೆ ಉಪಯೋಗಿಸುವದಂದರೆ ಇದೇ ಆಗಿದೆ. ದೇವರು ಹೇಳುತ್ತಾನೆ "ಅವರಲ್ಲಿರುವದೆಲ್ಲಾ ನಾನೇ ಅನುಗ್ರಹಿಸಿದ್ದು, ಇದು ಅವರಿಗೆ ತಿಳಿಯದು." ಹಾಗಾದರೆ ನೀವು ಏನು ಹೇಳುತ್ತಿರಿ? ಎಲ್ಲವೂ ದೇವರಿಂದ ಬಂದಿದೆಯೆಂದು ನಿಮ್ಮ ಅರಿವಿಗೆ ಬಂದಿರುವದಾದರೆ, ದೇವರ ಬಳಿ ನಿಮ್ಮದೆಲ್ಲವನ್ನೂ ಸಮರ್ಪಿಸುತ್ತಾ ಹೀಗೆ ಹೇಳುತ್ತಿರಿ "ದೇವರೆ ನಿನ್ನಿಂದಲೇ ನಾನೆಲ್ಲವನ್ನು ಪಡೆದಿದ್ದೆನೇ , ಹಾಗಾಗಿ ನನಗಿರುವದೆಲ್ಲಾ ನಿನ್ನ ರಾಜ್ಯಕ್ಕಾಗಿ ಉಪಯೋಗಿಸುತ್ತೇನೆ."

ಇಸ್ರಾಯೇಲ್ಯರು ಎಷ್ಟೇ ಅಪನಂಬಿಕೆಯಿಂದ ತುಂಬಿದ್ದರೂ ಹೋಶೇಯ ೨:೧೪ ರಲ್ಲಿ ದೇವರು ಹೀಗೆ ಹೇಳುತ್ತಾನೆ "ನಾನು ಅವಳನ್ನು ಒಲಿಸಿ ಅಡವಿಗೆ ಕರಕೊಂಡು ಹೋಗಿ ಅವಳೊಂದಿಗೆ ಹೃದಯಂಗಮವಾಗಿ ಮಾತಾಡುವೆನು."ಯಾವ ಗಂಡನೂ ಕೂಡ ತನ್ನ ಜೊತೆ ಅಪನಂಬಿಗಸ್ತವಿರುವ ಸ್ತ್ರೀ ಜೊತೆ ಮೃದುವಾಗಿ ಮಾತಾಡಲಾರನು. ಆದರೆ ದೇವರು ೨:೧೫ ರಲ್ಲಿ ಹೇಳುತ್ತಾನೆ "ಅವಳ ದ್ರಾಕ್ಷೆಯ ತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು, ಆಕೋರಿನ ತಗ್ಗನ್ನೇ ಅವಳ ಸುಖ ನೀರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಯೌವನದಲ್ಲಿ ಐಗುಪ್ತ ದೇಶದೊಳಗಿಂದ ಹೊರಟು ಬಂದ ದಿನದಲ್ಲಿ ಇದ್ದಂತೆ ಅಲ್ಲಿ ಒಲುಮೆಯಿಂದಿರುವಳು". ನಾವು ಯೆಹೋಶುವ ೭ ನೇ ಅಧ್ಯಾಯದಲ್ಲಿ ಯಾವ ರೀತಿಯಾಗಿ ಆಕಾನನು ದೇವರಿಗೆ ಮಿಸಲಾಗಿಟ್ಟ ವಸ್ತುಗಳಲ್ಲಿ ಕೆಲವನ್ನು ಕದ್ದುಕೊಂಡಿದರಿಂದ ಆಕೋರಿನಲ್ಲಿಯೇ ಸಾವಿಗಿಡಾದನು, ಅದು ಪಾಪಕ್ಕಾಗಿ ಮಾಡಿದ ನ್ಯಾಯತೀರ್ಪಿನ ಸ್ಥಳ ಆಗಿತ್ತು ಆದರೆ ದೇವರು ಈಗ ಹೀಗೆ ಹೇಳುತ್ತಾನೆ" ನ್ಯಾಯತೀರ್ಪಿನ ಸ್ಥಳವನ್ನು ನಿಮ್ಮ ಆಶ್ರಗಿರಿಯಾಗಿ ಮಾರ್ಪಡಿಸುವೆನು".

ನೀವು ತಪ್ಪಿತಸ್ತರಾಗಿದ್ದರಿಂದ, ನಿಮ್ಮ ಮೇಲೆ ನ್ಯಾಯ ತೀರ್ಪು ಹಾಗು ಶಿಕ್ಷೆಯನ್ನು ಬರಮಾಡಿಕೊಂಡಿದ್ದರೂ ನಿಮ್ಮ ಪಾಪಗಳನ್ನು ಅರಿಕೆ ಮಾಡಿದ ದೆಸೆಯಿಂದಾಗಿ ಈ ಜಾಗದಲ್ಲಿಯೇ ನಿಮಗಾಗಿ ಆಶ್ರಯದುರ್ಗವನ್ನು ತೆರೆಯುತ್ತೇನೆ, ಇದರಿಂದ ನಿಮ್ಮಿಂದ ಒಂದು ಸುಂದರವಾದ ಜೀವಿತ ಹೊರ ಬರುತ್ತದೆ."

ದೇವರ ಪ್ರೀತಿಯಲ್ಲಿ ಹಿಂಜರಿದ ಮತ್ತು ಆತನ ಪ್ರೀತಿಯಿಂದ ದೂರ ಸರಿದ ಪ್ರತಿಯೊಬ್ಬನಿಗೂ ಇದು ಒಂದು ಉತ್ತೇಜನ ತುಂಬುವ ಸುದ್ದಿಯಾಗಿದೆ. ಅನೇಕರು ತಮ್ಮ ಜೀವನದ ಅಮುಲ್ಯ ದಿನಗಳನ್ನು ವ್ಯರ್ಥವಾಗಿ ಕಳೆದುಕೊಂಡಿದ್ದಕ್ಕಾಗಿ ಎದೆಗುಂದಿದ್ದಾರೆ. ಈ ರೀತಿಯಾದ ಸುಸಮಾಚಾರ ಅವರ ಯೌವನದಿನದಲ್ಲಿ ಯಾಕೆ ತಿಳಿಯಲಿಲ್ಲ ಎಂಬುದಾಗಿ ವ್ಯಥೆಪಡುತ್ತಾರೆ. ಆದರೆ ನೀವು ಶಿಕ್ಷಿತರಾಗಿದ್ದಿರಿ, ನೋವನ್ನು ಅನುಭವಿಸಿದ್ದಿರಿ. ಆದರಿಂದ ದೇವರು ಹೀಗೆ ಹೇಳುತ್ತಾನೆ "ಎದೆಗುಂದದಿರು ಆಕೋರಿನ ಕಣಿವೆಗಳನ್ನು ನಿನಗಾಗಿ ಆಶಾದುರ್ಗವನ್ನಾಗಿ ಮಾರ್ಪಡಿಸುತ್ತೇನೆ".

ಇನ್ನೂ ಮುಂದೆ ಓದುವಾಗ ಹೋಶೇಯ ೨:೧೬ ರಲ್ಲಿ "ಆ ಕಾಲದಲ್ಲಿ ನೀನು ನನ್ನನ್ನು ಇನ್ನು ಧಣಿ ಅನ್ನದೆ, ನನ್ನ ಗಂಡ ಅನ್ನುವಿ". ಹಳೆಯ ಒಡಂಬಡಿಕೆಯಲ್ಲಿ ದೇವರ ಜೋತೆ ನಾವು ಗಂಡ, ಹೆಂಡತಿ ಸಂಬಂಧವಾಗಿ ಇರುವದರ ಬಗ್ಗೆ ತಿಳಿದಿರಲಿಲ್ಲ. ಈ ತರಹದ ಸಂಬಂಧವನ್ನು ದೇವರ ಪವಿತ್ರಾತ್ಮ ನಮ್ಮಲ್ಲಿ ತರುತ್ತಾನೆ. ಯಾವ ರೀತಿಯಾಗಿ ಅಬ್ರಹಾಮನ ಸೇವಕನು ಇಸಾಕನಿಗೆ ಕನ್ಯೆಯನ್ನು ತಂದನೊ ಅದೇ ರೀತಿಯಾಗಿ ಪವಿತ್ರಾತ್ಮನು ನಮ್ಮನ್ನು ಯೇಸುಕ್ರಿಸ್ತನ ಬಳಿ ಆತನ ಜೊತೆ ಮದುವೆ ಆಗಲಿಕ್ಕೆ ಬರುಮಾಡುತ್ತಾನೆ. ಹಳೆಯ ಒಡಂಬಡಿಕೆಯಲ್ಲಿ ದೇವರನ್ನು ಧಣಿ ಎಂಬುದಾಗಿ ತಿಳಿದಿದ್ದರು, ಆದರೆ ಇಗ ಆತನು ನಮ್ಮ ಗಂಡನಾಗಿದ್ದಾನೆ.

ದೇವರಲ್ಲಿ ಯಾವ ರೀತಿಯಾದ ಸಂಬಂಧ ನಿಮ್ಮದಾಗಿದೆ? ಈಗ ದೇವರು ನಿಮ್ಮ ಜೊತೆ ಒಬ್ಬ ಧಣಿ (ಮಾಲಿಕ)ನಾಗಿ ಬಯಸದೆ, ನಿಮ್ಮ ಗಂಡನಾಗಿರಬೇಕೆಂದು ಆಶಿಸುವದು ನಿಮಗೆ ತಿಳಿದಿದೆಯಾ? ಅನೇಕರಿಗೆ ದೇವರ ಸೇವೆಯು ಶ್ರಮದಾಯಕವಾಗಿ ಮತ್ತು ಬೇಸರವಾಗಿ ತೋರುತ್ತದೆ ಏಕೆಂದರೆ ಅದು ಮಾಲಿಕ ಮತ್ತು ಸೇವಕನ ರೀತಿಯಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ನೋಡುವದಾದರೆ, ಒಬ್ಬ ಕಠಿಣವಾದ ಮೇಲಾಧಿಕಾರಿ ಕೆಳಗೆ ಕೇವಲ ಸಂಬಳಕ್ಕೊಸ್ಕರ ದುಡಿಯುವಂಥದ್ದಾಗಿದೆ.

ಆದರೆ ಹೆಂಡತಿ, ಗಂಡನಿಗೆ ಸಂಬಳಕ್ಕೊಸ್ಕರ ದುಡಿಯುವದಿಲ್ಲ. ಗಂಡನು ತನ್ನ ಆಸ್ತಿಯಲ್ಲಿ ಪಾಲು ಕೊಡುತ್ತಾನೆಯೇ ಹೊರತು ಒಬ್ಬ ಮೇಲಾಧಿಕಾರಿ ತನ್ನ ಉದ್ಯೋಗಿ ಜೊತೆ ಅಲ್ಲ. ಗಂಡನು ತನ್ನ ಹೆಂಡತಿಯ ಕಾಳಜಿ ವಹಿಸುತ್ತಾನೆ, ಆದರೆ ಹೆಂಡತಿ ಇವೆಲ್ಲವುಗೊಸ್ಕರ ಗಂಡನ ಸೇವೆ ಮಾಡುವದಿಲ್ಲ. ಆದರೆ ತನ್ನ ತುಂಬ ಪ್ರೀತಿಯಿಂದ ಸೇವೆ ಮಾಡುತ್ತಾಳೆ. ದೇವರು ಹೋಶೇಯ ೨:೨೦ ರಲ್ಲಿ "ನಾನು ನಿನ್ನನ್ನು ನೀತಿ ನ್ಯಾಯ ಪ್ರೀತಿ ದಯೆಗಳಲ್ಲಿ ವರಿಸುವೆನು" ಎಂಬುದಾಗಿ ಹೇಳುತ್ತಾನೆ. ದೇವರು ತನ್ನಿಂದ ದೂರ ಹೊದಂತ ಆತ್ಮವನ್ನು ತನ್ನದಾಗಿಸಲಿಕ್ಕೆ ತವಕಪಡುತ್ತಾನೆ, ಈ ರೀತಿಯಾಗಿ ದೇವರು ನಮ್ಮೆಲ್ಲರನ್ನು ಪ್ರೀತಿಸುತ್ತಾನೆ.

ಹೋಶೇಯನ ಹೆಂಡತಿ ತನ್ನನ್ನು ಒಬ್ಬ ದಾಸಿಯಾಗಿ ಮಾರಿದಳು, ಆದರೆ ಹೋಶೇಯನು ೩:೨,೩ ರಲ್ಲಿ "ಹದಿನೈದು ತುಂಡು ಬೆಳ್ಳಿಯನ್ನೂ, ಒಂಬತ್ತು ಕ್ವಿಂಟಾಲ್ ಜವೆಗೋಧಿಯನ್ನೂ ಕೊಟ್ಟು ಅವಳನ್ನು ಕೊಂಡು ಕೊಂಡೆನು, ಬಳಿಕ ನಾನು ಆಕೆಗೆ, "ನೀನು ನನ್ನೊಂದಿಗೆ ಅನೇಕ ದಿನಗಳವರೆಗೆ ಮನೆಯೊಳಗೆ ಇರಬೇಕು. ನೀನು ವೇಶ್ಯೆಯಂತಿರಬಾರದು. ನೀನು ಪರ ಪುರುಷನೊಡನೆ ಇರಬಾರದು. ನಾನೇ ನಿನ್ನ ಗಂಡನಾಗಿರುವೆನು" ಎಂದು ಹೇಳಿದನು.

ಇದು ದೇವರ ಪ್ರೀತಿಯ ಚಿತ್ರವಾಗಿದೆ.