ಕ್ರಿಸ್ತನು ಶಿಲುಬೆಯ ಮೇಲೆ ಸತ್ತಾಗ ಎಲ್ಲ ವಿಶ್ವಾಸಿಗಳೂ ಸತ್ತರು ಎಂಬ ಶ್ರೇಷ್ಟ ಸತ್ಯದ ಬಗ್ಗೆ ಪೌಲನು ಬಹಳವಾಗಿ ಮಾತಾಡುತ್ತಾನೆ (2ಕೊರಿಂಥ. 5:14). ರೋಮಾಪುರದವರಿಗೆ, ಕೊರಿಂಥದವರಿಗೆ ಮತ್ತು ಗಲಾತ್ಯದವರಿಗೆ ಬರೆದ ಪತ್ರಗಳಲ್ಲಿ ಅವನು ಇದರ ಬಗ್ಗೆ ಮಾತಾಡುತ್ತಾನೆ (ಗಲಾತ್ಯ 2:20). "ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತು"(2ಕೊರಿಂಥ. 5:14). ಇದು ದೇವರು ಪೌಲನಿಗೆ ಕೊಟ್ಟ ಅಪ್ಪಟ ಪ್ರಕಟನೆಯಾಗಿತ್ತು. ಪೇತ್ರ, ಯೋಹಾನ ಅಥವಾ ಯಾಕೋಬರು ಅದರ ಬಗ್ಗೆ ಬರೆಯುವುದನ್ನು ನಾವು ಕಾಣುವುದಿಲ್ಲ. ಕ್ರಿಸ್ತನು ಸತ್ತು ಎದ್ದಾಗ, ದೇವರ ದೃಷ್ಟಿಯಲ್ಲಿ, ಎಲ್ಲಾ ವಿಶ್ವಾಸಿಗಳು ಅವನೊಡನೆ ಸತ್ತು ಎದ್ದರು. ಆದ್ದರಿಂದ, ನಾವು ನಮಗಾಗಿ ಮಾತ್ರ ಜೀವಿಸದೆ, ಅವನಿಗಾಗಿ ಮಾತ್ರ ಜೀವಿಸಬೇಕು (5:15).
"ಕ್ರಿಸ್ತನು ಸತ್ತದ್ದೇಕೆ?" ಎಂದು ವಿಶ್ವಾಸಿಗಳಿಗೆ ಕೇಳಿದರೆ, ಬಹುತೇಕ ಜನರು ಕೊಡುವ ಉತ್ತರವೆಂದರೆ, 1ಕೊರಿಂಥ. 5:14. "ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು" ಅದು ಸರಿಯೇ. ಆದರೆ ಅದು ಉತ್ತರದ ಒಂದು ಭಾಗ ಮಾತ್ರ. ಅದರೆ ಎರಡನೇ ಭಾಗ ಇಲ್ಲಿದೆ. "ನಾವು ನಮಗಾಗಿಯೇ ಜೀವಿಸದೆ ನಮಗೋಸ್ಕರ ಸತ್ತು ತಿರಿಗೆ ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಸತ್ತನು" (2.ಕೊರಿಂಥ. 5:15). ನಾವು ನಮಗಾಗಿಯೇ ಜೀವಿಸಿದಾಗ ಕ್ರಿಸ್ತನು ಸತ್ತ ಉದ್ದೇಶವನ್ನು ನಾವು ನಿಷ್ಪಲಗೊಳಿಸುತ್ತೇವೆ. ನಾವು ಪಾಪದಲ್ಲಿಯೇ ಜೀವಿಸುವಾಗ, ಕ್ರಿಸ್ತನು ನಮಗಾಗಿ ಸತ್ತ ಸತ್ಯವನ್ನು ನಾವು ದುರುಪಯೋಗಪಡಿಸಿಕೊಳ್ಳುತ್ತೇವೆ ಮತ್ತು ದೇವರ ಕೃಪೆಯನ್ನೂ ನಾವು ದುರುಪಯೋಗಪಡಿಸಿಕೊಳ್ಳುತ್ತೇವೆ. ತನಗಾಗಿಯೇ ಜೀವಿಸುವ ವಿಶ್ವಾಸಿಯು ದೇವರ ಕೃಪೆಯ ಸಂಪೂರ್ಣ ಉದ್ದೇಶವನ್ನು ಅರ್ಥಮಾಡಿಕೊಂಡಿಲ್ಲ. ದೇವರ ಪೂರ್ಣ ಸತ್ಯಕ್ಕೆ ನಮ್ಮನ್ನು ಕುರುಡಾಗಿಸುವುದೇ ಸೈತಾನನ ಉದ್ದೇಶ. ಕ್ರಿಸ್ತನು ನಮ್ಮ ಪಾಪಗಳಿಗೆ ಸತ್ತನು ಎಂಬುದನ್ನು ನಾವು ನೋಡುವುದಾದರೆ, ಕ್ರಿಸ್ತನ ಮರಣದ ಪೂರ್ಣ ಉದ್ದೇಶಕ್ಕೆ ನಮ್ಮನ್ನು ಕುರುಡಾಗಿಸಲು ಸೈತಾನನು ಪ್ರಯತ್ನಿಸುತ್ತಾನೆ.
ಸ್ವ-ಕೇಂದ್ರೀಕೃತವಾದ ಜೀವಿತದಿಂದ ಶಾಶ್ವತವಾಗಿ (ಖಾಯಂ ಆಗಿ) ನಮ್ಮನ್ನು ಬಿಡುಗಡೆಗೊಳಿಸಲು ಯೇಸುವು ಸತ್ತನು. 1.ಕೊರಿಂಥ. 15:3 ಮತ್ತು 2 ಕೊರಿಂಥ. 5:15 , ಈ ಎರಡು ವಚನಗಳನ್ನು ನಾವು ಸೇರಿಸಿದಾಗ, ನಾವು ತಿಳಿಯುವುದೇನೆಂದರೆ, ಎಲ್ಲಾ ಪಾಪದ ಬೇರು - ಸ್ವಾರ್ಥ ಎಂಬುದಾಗಿ. ನೀನು ನಿನಗಾಗಿಯೇ ಜೀವಿಸುವಾಗ ನಿನಗೆ ಪಾಪದ ಮೇಲೆ ಜಯ ಎಂದಿಗೂ ಸಿಗದು. ಒಬ್ಬ ವ್ಯಕ್ತಿಯು ಪಾಪದಲ್ಲಿ ಜೀವಿಸುತ್ತಾನೆಯೆಂದರೆ, ಅವನು ತನಗಾಗಿಯೇ ಜೀವಿಸುತ್ತಾನೆ. ನೀನು ನಿನಗಾಗಿಯೇ ಜೀವಿಸುವ ತನಕ ನಿನಗೆ ಪಾಪದ ಮೇಲೆ ಜಯ ಸಿಗದು. ಪಾಪದ ಬೇರನ್ನು ಕಡಿದು ಹಾಕದ ಹೊರತಾಗಿ, ಅದು ಫಲವನ್ನು ಉತ್ಪಾದಿಸುತ್ತಲೇ ಇರುತ್ತದೆ. ನೀನು ಬೇರನ್ನು (ಸ್ವ-ಕೇಂದ್ರೀಕ್ರತೆಗೆ) ಕೊಡಲಿಯಿಂದ ತುಂಡರಿಸಿದರೆ, ಅದರಿಂದ ಬರುವ ಕೆಟ್ಟ ಫಲವನ್ನು (ಪಾಪ) ನೀನು ತುಂಡರಿಸುತ್ತಾ ಇರಬೇಕಾಗಿಲ್ಲ.
ಅನೇಕ ಜನರು ಮೇಲಣವಾಗಿ ಪಾಪವನ್ನು ಜಯಿಸಿದ್ದಾರೆ. ಆದರೆ ಬೇರು, ತನಗಾಗಿಯೇ ಜೀವಿಸುವುದರ ಬೇರು ಇನ್ನೂ ಅಲ್ಲೇ ಇದೆ. ನೀನು ನಿನಗಾಗಿಯೇ ಜೀವಿಸುವ ತನಕ ಪಾಪದ ಮೇಲೆ ಜಯವನ್ನು ಸಾಧಿಸಲಾರೆ. "ಈ ದಿನದಿಂದ ನಾನು ನನ್ನ ಜೀವಿತವನ್ನು ಕೇಂದ್ರವಾಗಿರಿಸಿಕೊಂಡು ಯಾವುದೇ ನಿರ್ಧಾರವನ್ನು ಮಾಡಲಾರೆ. ನನಗೆ ಹೇಗೆ ಉಪಯೋಗವಾಗುತ್ತದೆ ಎಂಬುದರ ಮೇಲೆ ಹೊಂದಿಕೊಂಡು ನಾನು ಯಾವುದೇ ನಿರ್ಧಾರವನ್ನು ಮಾಡಲಾರೆ" ಎಂಬುದನ್ನು ನೀನು ಒಮ್ಮೆಗೇ ಇಂದು ನಿರ್ಧರಿಸಬೇಕು. ಇದು ನನಗೆ ಹೇಗೆ ಉಪಯೋಗವಾದೀತು? ಇದು ನನ್ನ ಕುಟುಂಬಕ್ಕೆ ಹೇಗೆ ಉಪಯೋಗವಾದೀತು? ಈ ಪ್ರಶ್ನೆಗಳ ಮೇಲೆ ಹೊಂದಿಕೊಂಡು ಕ್ರೈಸ್ತ ಕೆಲಸದ ಬಗೆಗಿನ ನಿರ್ಧಾರಗಳನ್ನು ಮಾಡುವ ಜನರು ಎಷ್ಟಿದ್ದಾರೆ ಎಂಬುದು ನಿನಗೆ ತಿಳಿದಿದೆಯೇ?
ಜಗತ್ತಿನಲ್ಲಿನ ಪ್ರತಿಯೊಬ್ಬ ಮತಾಂತರ ಹೊಂದದ, ನಾಸ್ತಿಕ ಪಾಪಿ ಕೂಡ ನಿರ್ಧಾರಗಳನ್ನು ಮಾಡುವುದು ಹೀಗೇನೆ. ನೀನು ಯಾವುದೇ ಒಂದು ಚರ್ಚಿಗೆ ಹೋಗುತ್ತೀಯ ಮತ್ತು ಅವನು ಬಹುಷ ಒಬ್ಬ ನಾಸ್ತಿಕ. ಅದು ಬಿಟ್ಟು ಅವನಿಗಿಂತ ನೀನು ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ. ಆದರೆ ಆಂತರಿಕವಾಗಿ ನೀನು ಅವನಂತೆಯೇ. ನಮಗೆ ಅದರಿಂದ ಬಿಡುಗಡೆ ಕೊಡಿಸಲು ಯೇಸು ಸತ್ತನು. ಆದ್ದರಿಂದ, ನಾವು ನಮಗೇ ಪ್ರಯೋಜನವಾಗುವ ನಿರ್ಧಾರವನ್ನು ಎಂದೂ ಮಾಡದೆ, ದೇವರಿಗೆ ಮಹಿಮೆಪಡಿಸುವ ಮತ್ತು ದೇವರ ರಾಜ್ಯಕ್ಕೆ ಮತ್ತು ದೇವರ ಉದ್ದೇಶಕ್ಕೆ ಉಪಯೋಗವಾಗುವ ನಿರ್ಧಾರವನ್ನು ಮಾಡಬೇಕು. ಅಂಥಹ 100 ಜನರಿದ್ದರೆ, ನಾವು ಭಾರತವನ್ನು ತಲೆಕೆಳಗಾಗಿಸಬಹುದು. ಆದರೆ ಅಂಥಹ ಕೆಲವರನ್ನಾದರೂ ಕಂಡುಕೊಳ್ಳುವುದು ಬಹಳ ಕಷ್ಟ.
ಎಂದಿಗೂ ನಾವು ನಮ್ಮಷ್ಟಕ್ಕೇ ಜೀವಿಸಬಾರದು ಎಂಬುದನ್ನು ಬಹುತೇಕ ಕ್ರೈಸ್ತರು ಅರ್ಥಮಾಡಿಕೊಂಡಿಲ್ಲ. ಅವರು 5:15 ರಂಥಹ ವಚನಗಳನ್ನು ಬಿಟ್ಟು 5:17ರಂಥಹ ವಚನಗಳಿಗೆ ಹೋಗುತ್ತಾರೆ. ನಾನು ನಿಮಗೆ ಕೇಳಬಯಸುವುದೇನೆಂದರೆ, "(ಕಳೆದು)ಹೋದ ಅಥವಾ (ಕಳೆದು)ಹೋಗಬೇಕಾದ ಹಳೆ ಸಂಗತಿಗಳು ಯಾವುವು?" "ಸ್ವ-ಹಿತಕ್ಕಾಗಿ ಜೀವಿಸುವುದು" ಕಳೆದುಹೋಗಿದೆಯೇ? ನಿನ್ನ ಆಕಾಂಕ್ಷೆಗಳು ಮತ್ತು ಗುರಿಗಳು ನೂತನವಾಗಿವೆಯೇ?