ಆತ್ಮದಲ್ಲಿ ಬಡವರಾಗಿರುವವರು ಧನ್ಯರು
ನಮ್ಮ ಆತ್ಮಿಕ ಕೊರತೆಗಳ ಕುರಿತು ನಿರಂತರವಾಗಿ ಎಚ್ಚರಿಕೆಯಿಂದಿರುವುದೇ ಆತ್ಮದ ಬಡತನ ಎಂಬುದರ ಅರ್ಥವಾಗಿದೆ

ದೈವಿಕ ಸಂದೇಶಗಳು


ನೀವು ಮಾಡುತ್ತಿರುವುದು ಶಿಷ್ಯರನ್ನೋ ಅಥವಾ..
ಶೇಷ್ಟ ಆಜ್ಞೆಯನ್ನು ನೋಡಿರಿ
ಪವಿತ್ರಾತ್ಮನ ತುಂಬಿಸುವಿಕೆಯನ್ನು ಪಡೆಯಿರಿ
ನೀವು ಪ್ರಯತ್ನಿಸಿ, ಪ್ರಯತ್ನಿಸಿ ಸೋತಿದ್ದೀರಾ? ಮತ್ತೊಮ್ಮೆ ಪ್ರಯತ್ನಿಸಲು ಹೋಗಿ ನಿಮ್ಮ ನಂಬಿಕೆ ಕಡಿಮೆಯಾಗಿದೆ..
ನಿರ್ಜೀವ ಕಾರ್ಯಗಳು
ನಿಜವಾಗಿಯೂ ನಿರ್ಜೀವ ಕಾರ್ಯಗಳು ಅಂದರೆ ಏನು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ತಿಳುವಳಿಕೆ ಇರುವುದು ತುಂಬಾ ಅಗತ್ಯವಾಗಿದೆ

ಪುಸ್ತಕಗಳು


ಲೈಂಗಿಕತೆ, ಪ್ರೀತಿ ಮತ್ತು ಮದುವೆ
ಮತ್ತೊಬ್ಬರನ್ನು ಸಂಧಿಸುವಂತದ್ದು ಸರಿನಾ? ಪ್ರೀತಿಯಲ್ಲಿ ಬೀಳುವಂತದರ ಬಗ್ಗೆ ಏನು ಹಾಗಾದರೆ?..
ಜಯದ ರಹಸ್ಯಗಳು
ನೀವು ನಿಜವಾಗಿಯೂ ಕ್ರಿಸ್ತನ ಶಿಷ್ಯಂದಿರಾಗಿದ್ದರೆ, ದೇವರು ಯೇಸುವನ್ನು ಪ್ರೀತಿಸಿದಷ್ಟೆ,..
ಸ್ವರ್ಗದಂತಹ ಮನೆ
ನವಜೋಡಿಗಳಿಗೆ ಮಾರ್ಗದರ್ಶನ
ಸೋಲಿನ ಉದ್ದೇಶ
ನೀವು ನಿಮ್ಮನ್ನು ”ನಿರೀಕ್ಷೆಯಿಲ್ಲದ ಸೋತವರು” ಎಂಬುದಾಗಿ ಕಾಣುತ್ತೀರೋ?ಒಂದು ವೇಳೆ ನೀವು ಸಾವಿರ..
ಅಧಿಕ (19)

ನಾವು ನಂಬುವುದು

Body: 
Christian Fellowship Church, Bangalore - 2015
Christian Fellowship Church, Bangalore - 2015

ನಾವು ನಂಬುವುದು:-

ಸತ್ಯವೇದವು (ಬೈಬಲಿನ ೬೬ ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.

ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.

ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.

ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.

ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.

ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.

ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.

ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.

ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.

ಅಧಿಕ